ICC ಚಾಂಪಿಯನ್ಸ್ ಟ್ರೋಫಿಗೆ ದಿನಗಣನೆ ಶುರುವಾಗಿದ್ದು, ಟೀಂ ಇಂಡಿಯಾ ಘೋಷಣೆ ವಿಳಂಬ ಸಾಧ್ಯತೆ ಇದೆ.
ಬರೀ ಸಾಬ್ರಿಗೆ ಮುತ್ತು ಕೊಟ್ಕೊಂಡಿರಿ: ಪರಮೇಶ್ವರ್ಗೆ ಯತ್ನಾಳ್ ತಿರುಗೇಟು!
ಐಸಿಸಿಯ ಸೂಚನೆಗಳನ್ನು ಅನುಸರಿಸಿ ಟೀಂ ಇಂಡಿಯಾದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸಮಯಕ್ಕೆ ತಂಡವನ್ನು ಪ್ರಕಟಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ಮಾಹಿತಿಯ ಪ್ರಕಾರ, ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಲು ಐಸಿಸಿ ಬಳಿ ಸಮಯಾವಕಾಶ ಕೇಳಬಹುದು. ಆದರೆ, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಎರಡು ಮೂರು ದಿನಗಳಲ್ಲಿ ಪ್ರಕಟಿಸಬಹುದು.
ಸಾಮಾನ್ಯವಾಗಿ ತನ್ನ ಯಾವುದೇ ಪಂದ್ಯಾವಳಿಗಳಿಗೆ 4 ವಾರಗಳ ಮೊದಲು ತಾತ್ಕಾಲಿಕ ತಂಡವನ್ನು ಘೋಷಿಸಲು ಎಲ್ಲಾ ಮಂಡಳಿಗಳಿಗೆ ಸೂಚನೆ ನೀಡುತ್ತದೆ. ಇದಾದ ನಂತರ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ಕಾಲಾವಕಾಶವನ್ನು ನೀಡುತ್ತದೆ. ಆದರೆ ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಐಸಿಸಿ, 5 ವಾರಗಳ ಮುಂಚಿತವಾಗಿಯೇ ಎಲ್ಲಾ 8 ಮಂಡಳಿಗಳಿಗೆ ತಮ್ಮ ತಂಡವನ್ನು ಪ್ರಕಟಿಸುವಂತೆ ಸೂಚಿಸಿದೆ. ಸಮಯ ಮುಗಿಯುತ್ತಾ ಬಂದರೂ ಇಂಗ್ಲೆಂಡ್ ಹೊರತುಪಡಿಸಿ ಯಾವ ಮಂಡಳಿಯೂ ತನ್ನ ತಂಡವನ್ನು ಪ್ರಕಟಿಸಿಲ್ಲ. ಇದೀಗ ಕ್ರಿಕ್ಬಜ್ ವರದಿಯ ಪ್ರಕಾರ, ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಲು ಒಂದು ವಾರ ಕಾಲಾವಕಾಶ ಕೇಳಬಹುದು. ಆ ಪ್ರಕಾರ ಜನವರಿ 18 ಅಥವಾ 19 ರೊಳಗೆ ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸುವ ನಿರೀಕ್ಷೆಯಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತ ತಂಡ ಜನವರಿ 22ರಿಂದ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆ ಬಳಿಕ ಫೆಬ್ರವರಿ 6 ರಿಂದ 3 ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಈ ಎರಡೂ ಸರಣಿಗಳಿಗೆ ಟೀಂ ಇಂಡಿಯಾ ಇನ್ನೂ ಪ್ರಕಟವಾಗಿಲ್ಲ. ವರದಿ ಪ್ರಕಾರ ಎರಡು ಮೂರು ದಿನಗಳಲ್ಲಿ ಟಿ20 ಸರಣಿಗೆ ತಂಡದ ಪಟ್ಟಿ ಬಿಡುಗಡೆಯಾಗಲಿದೆ.
ಬಾಂಗ್ಲಾದೇಶದ ವಿರುದ್ಧ ಆಡಿದ್ದ ಭಾಗಶಃ ಆಟಗಾರರೇ ಈ ಸರಣಿಯಲ್ಲಿ ಆಡುವ ನಿರೀಕ್ಷೆಯಿದೆ. ಆದರೆ ಏಕದಿನ ಸರಣಿಗೆ ತಂಡವನ್ನು ಪ್ರಕಟಿಸುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆಗಳಿವೆ