ಬೆಂಗಳೂರು: ತಿರುಪತಿಯಲ್ಲಿ ಕರ್ನಾಟಕದಿಂದ ಯಾವುದೇ ಶಾಸಕರಿಗೆ ದರ್ಶನ ಭಾಗ್ಯ ಸಿಗ್ತಿಲ್ಲ, ಆದ್ದರಿಂದ ದರ್ಶನ ಭಾಗ್ಯ ಕಲ್ಪಿಸಬೇಕು ಎಂದು ವಿಧಾನ ಪರಿಷತ್ ಶಾಸಕರಾದ ಟಿ.ಎ.ಶರವಣ ಅವರು ಆಗ್ರಹಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿಂದು ಮಾತನಾಡಿದ ಅವರು, ತಿರುಪತಿಯಲ್ಲಿ ಕರ್ನಾಟಕದಿಂದ ಯಾವುದೇ ಶಾಸಕರಿಗೆ ದರ್ಶನ ಭಾಗ್ಯ ಸಿಗ್ತಿಲ್ಲ.
ತಿರುಪತಿಯಲ್ಲಿ ದರ್ಶನ ಭಾಗ್ಯ ಬೇಕು ಅಂತ ತೆಲಂಗಾಣದ ಶಾಸಕರು ಆಂಧ್ರಪ್ರದೇಶದ ಸಿಎಂ ಅವರನ್ನ ಭೇಟಿ ಮಾಡಿ ಸರ್ಕಾರಿ ಆದೇಶ ಮಾಡಿಸಿಕೊಂಡಿದ್ದಾರೆ. ಅದರಂತೆ ಕರ್ನಾಟಕದ ಶಾಸಕರ ನಿಯೋಗ ಆಂಧ್ರಪ್ರದೇಶದ ಸಿಎಂ ಅವರನ್ನು ಭೇಟಿಯಾಗಿ ದರ್ಶನ ಭಾಗ್ಯ ಕಲ್ಪಿಸಬೇಕು ಅಂತ ಮನವಿ ಮಾಡಿದ್ದಾರೆ.
ಇನ್ನೂ ಹೊರ ರಾಜ್ಯಗಳಲ್ಲಿರುವ ಮುಜರಾಯಿ ಇಲಾಖೆ ಆಸ್ತಿಗಳು ಯಾವುವು ಮತ್ತು ಅವುಗಳಿಂದ ಸರ್ಕಾರಕ್ಕೆ ಬರುವ ವಾರ್ಷಿಕ ಆದಾಯದವೆಷ್ಟು? ಜೊತೆಗೆ ಕಾಶಿವಿಶ್ವನಾಥ ಮತ್ತು ತಿರುಪತಿಯಲ್ಲಿ ಕರ್ನಾಟಕ ಭವನಗಳಲ್ಲಿರುವ ಕೊಠಡಿಗಳ ಸಂಖ್ಯೆ ಎಷ್ಟು ಮತ್ತು ಅದರ ನಿರ್ವಹಣೆ ಜವಾಬ್ದಾರಿಯನ್ನು ಯಾರು ವಹಿಸಿಕೊಂಡಿದ್ದಾರೆ ಎನ್ನುವ ಕುರಿತು ಪ್ರಶ್ನಿಸಿದ್ದಾರೆ.