ಬೆಂಗಳೂರು: ಭ್ರಷ್ಟ ವಿಜಯೇಂದ್ರ, ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ಮಾಡ್ತಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಜಯೇಂದ್ರಗೆ ದುಡ್ಡಿನ ದುರಂಕಾರ ಇದೆ. ಮುಡಾ ಹಗರಣ ವಿಚಾರದಲ್ಲಿ ಸಿಎಂ ರಾಜೀನಾಮೆ ಕೇಳಿ ಪಾದಯಾತ್ರೆ ಮಾಡ್ತಾನೆ,
ಮೈಸೂರು ಮುಟ್ಟೋದರೊಳಗೆ ರಾಜೀನಾಮೆ ಕೊಡ್ಬೇಕು ಅಂತಾನೆ. ಸಿದ್ದರಾಮಯ್ಯ ಇವರದ್ದು ಎಲ್ಲವನ್ನು ಹೊರ ತೆಗೆದರೆ ಗೊತ್ತಾಗುತ್ತೆ. ಆದರೆ ಅವರು ಹೊರಗೆ ತೆಗೆಯುತ್ತಿಲ್ಲ ಎಂದರು.
Swollen Feet: ಪದೇ ಪದೇ ಪಾದಗಳು ಊದಿಕೊಳ್ಳುತ್ತವೆಯೇ..? ಇಲ್ಲಿದೆ ನೋಡಿ ಸಿಂಪಲ್ ಮನೆಮದ್ದುಗಳು
ಸಿಎಂ ಸಿದ್ದರಾಮಯ್ಯ ಜೊತೆ ಇವರದ್ದು ಏನೇನಿದ್ಯೋ ಏನೊ, ಇವರ ಮೇಲಿರುವ ಆರೋಪ ತೆಗೆದು ಬಿಟ್ರೆ ಕಥೆ ಮುಗಿದು ಹೋಗುತ್ತೆ. ಅದ್ಯಾಕೆ ಸಿದ್ದರಾಮಯ್ಯನವರು ಸುಮ್ಮನಿದ್ದಾರೋ ಇಲ್ಲ ಅವರದ್ದು ಏನಾದ್ರೂ ಇವರ ಹತ್ರ ಇದ್ಯೋ ಗೊತ್ತಿಲ್ಲ. ಅದಕ್ಕೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣ್ತಿದೆ. ಯತ್ನಾಳ್ ಅರೆಸ್ಟ್ ಗ್ಯಾರೆಂಟಿ ಅಂದ್ರು, ಎಲ್ಲಿ ನಾನೇನು ಅರೆಸ್ಟ್ ಆದ್ನಾ ಎಂದು ಪ್ರಶ್ನಿಸಿದರು.