ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 9 ಜನ ಪೌರ ಕಾರ್ವಿುಕರು ಸಿಂಗಾಪುರ ಪ್ರವಾಸಕ್ಕೆ ತೆರಳಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯು ರಾಜ್ಯದ ಪೌರ ಕಾರ್ವಿುಕರಿಗೆ ಸಿಂಗಾಪುರ ದೇಶದ ಪ್ರವಾಸವನ್ನು ಆಯೋಜಿಸಿದ್ದು, ಎರಡನೇ ತಂಡದಲ್ಲಿ ಹು-ಧಾ ಮಹಾನಗರ ಪಾಲಿಕೆಯ ಪೌರ ಕಾರ್ವಿುಕರು ಅವಕಾಶ ಪಡೆದಿದ್ದಾರೆ.
ವಿಕ್ರಂ ಸಣ್ಣಮನಿ, ಕಾಶಪ್ಪ ಮೇಲಿ, ವೆಂಕಟೇಶ ಮಾರತಾಡ, ರಾಮಾಂಜನೇಯ ಸಿಂಗಲ್ಮಾಲ, ಮಲ್ಲಪ್ಪ ಬಳಗನೂರು, ಸುಭಾಷ ನವಲಗುಂದ, ಶೇಖಪ್ಪ ಬೆಣಸಮಟ್ಟಿ, ಮಂಜುನಾಥ ಲಿಂಗದಾಳ ಹಾಗೂ ಬಸವರಾಜ್ ಅವಣ್ಣವರ ನ. 20ರಂದು ಸಿಂಗಾಪುರಕ್ಕೆ ಪ್ರಯಾಣ ಬೆಳೆಸಿದ್ದು ನ. 25ರಂದು ಮರಳಲಿದ್ದಾರೆ. ಈ ಪ್ರವಾಸದಲ್ಲಿ ಪೌರ ಕಾರ್ವಿುಕರು ಸಿಂಗಾಪುರ ದೇಶದಲ್ಲಿನ ಸ್ವಚ್ಛತೆ, ಅಲ್ಲಿನ ಕಾರ್ವಿುಕರ ಸವಲತ್ತುಗಳು, ಕಾರ್ಯವೈಖರಿ, ಇತ್ಯಾದಿ ವಿಷಯಗಳ ಕುರಿತು ಮಾಹಿತಿ ಪಡೆಯಲಿದ್ದು, ವಿವಿಧ ಘನ ತ್ಯಾಜ್ಯ ವಸ್ತು ಸಂಸ್ಕರಣ ಘಟಕಗಳಿಗೆ ಸಹ ಭೇಟಿ ನೀಡಲಿದ್ದಾರೆ.
ಇತ್ತೀಚೆಗೆ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರವಾಸಕ್ಕೆ ತೆರಳುತ್ತಿರುವ ಪೌರಕಾರ್ವಿುಕರಿಗೆ ಪಾಲಿಕೆ ವತಿಯಿಂದ ಬ್ಲೇಜರ್ ಕೋಟ್, ಬ್ಯಾಗ್ಗಳನ್ನು ಉಡುಗೊರೆಯಾಗಿ ನೀಡಲಾಯಿತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ವೀಣಾ ಬರದ್ವಾಡ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ
ಸಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರ, ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಇಇ ಮಲ್ಲಿಕಾರ್ಜುನ ಬಿ. ಎಂ., ಇತರರು ಇದ್ದರು.