ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ಉಲ್ಭಣಗೊಂಡಿದೆ. ರಾಜ್ಯದಲ್ಲಿ ಒಟ್ಟು 1,000 ಸಕ್ರಿಯ ಕೊವಿಡ್ ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಯಲ್ಲಿ 229 ಪಾಸಿಟಿವ್ ಕೇಸ್ಗಳು ವರದಿಯಾಗಿವೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಶೇಖಡ 6.49ರಷ್ಟು ಕೊವಿಡ್ ಪಾಸಿಟಿವ್ ರೇಟ್ ವರದಿಯಾಗಿದೆ.
ಕಳೆದ 24 ಗಂಟೆಯಲ್ಲಿ 3,527 ಟೆಸ್ಟ್ಗಳನ್ನು ಮಾಡಲಾಗಿದ್ದು, 2,972 RTCPR ಹಾಗೂ 555 RAT ಟೆಸ್ಟ್ಗಳನ್ನ ಮಾಡಲಾಗಿದೆ. ಬೆಂಗಳೂರಿನಲ್ಲೇ ಅತಿಹೆಚ್ಚು ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರಿನಲ್ಲಿ 517 ಕೇಸ್
ಬೆಂಗಳೂರಿನಲ್ಲಿ ಇಲ್ಲಿಯವರೆಗೂ 517 ಕೇಸ್ಗಳು ವರದಿಯಾಗಿವೆ. ಒಟ್ಟು 1000 ಸಕ್ರಿಯ ಪ್ರಕರಣಗಳಲ್ಲಿ 943 ಕೇಸ್ಗಳಲ್ಲಿ ಹೋಮ್ ಐಸೋಲೇಷನ್ನಲ್ಲಿ ಇರಲು ಸೂಚನೆ ನೀಡಲಾಗಿದೆ. 57 ಕೇಸ್ಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಐಸಿಯುನಲ್ಲಿ 22 ಕೇಸ್ಗಳಿಗೆ ಚಿಕಿತ್ಸೆ ನೀಡಲಾಗಿದೆ.