ವಿಜಯಪುರ:- ವಿದ್ಯಾರ್ಥಿನಿಯರರೊಂದಿಗೆ ಅಸಭ್ಯ ವರ್ತನೆ ತೋರಿ, ಸಹಕರಿಸುವಂತೆ ಕಿರಿಕಿರಿ ಕೊಟ್ಟ ಪ್ರಿನ್ಸ್ಪಾಲ್ ವಿರುದ್ಧ ವಿದ್ಯಾರ್ಥಿನಿಯರು ಕೇಸ್ ದಾಖಲಿಸಿರುವ ಘಟನೆ ಜರುಗಿದೆ.
ಕೃಷಿ ಇಲಾಖೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!? ಖಾಲಿ ಇವೆ 945 ಹುದ್ದೆಗಳು, ಆಸಕ್ತರು ಅಪ್ಲೈ ಮಾಡಿ!
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಮನಗೂಳಿಯಲ್ಲಿ ಘಟನೆ ಜರುಗಿದೆ. ಮನಗೂಳಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಸಚೀನಕುಮಾರ ಪಾಟೀಲ ವಿರುದ್ಧ ಎಪ್ ಐ ಆರ್ ದಾಖಲು ಮಾಡಲಾಗಿದೆ. ಅದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಂದ ಕೇಸ್ ದಾಖಲು ಮಾಡಲಾಗಿದೆ.
ದಿನನಿತ್ಯ ಕಾಲೇಜಿನಲ್ಲಿ ನನ್ನೊಂದಿಗೆ ಸಹಕರಿಸುವಂತೆ ಪ್ರಿನ್ಸಿಪಾಲ್ ವಿದ್ಯಾರ್ಥಿನಿಯರಿಗೆ ಕಿರಿಕಿರಿ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ರೋಸಿಹೋಗಿದ್ದ ವಿದ್ಯಾರ್ಥಿಗಳಿಂದ ಪ್ರಿನ್ಸಿಪಾಲ್ ಪಾಟೀಲ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಪ್ರಿನ್ಸ್ಪಾಲ ವಿರುದ್ಧ ವಿದ್ಯಾರ್ಥಿಗಳಿಂದ ಕಾಲೇಜು ಎದುರು ಪ್ರತಿಭಟನೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಪೊಲೀಸರು, ಪ್ರೀನ್ಸಿಪಾಲ್ ರನ್ನು ವಶಕ್ಕೆ ಪಡೆದಿದ್ದಾರೆ. ಮನಗೂಳಿ ಪೋಲಿಸ್ ಠಾಣೆಯಲ್ಲಿ ಪ್ರೀನ್ಸಿಪಾಲ್ ವಿರುದ್ದ ದೂರು ದಾಖಲಾಗಿದೆ.