ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಭಾರತ ಮೂಲದ ವಿವೇಕ್ ರಾಮಸ್ವಾಮಿ (Vivek Ramaswamy) ಹಿಂದೂ ಧರ್ಮದ ಸಾರ್ವತ್ರಿಕ ಮೌಲ್ಯಗಳ ಬಗ್ಗೆ ಮಾತನಾಡಿದ್ದಾರೆ. ಅಮೆರಿಕದ ಸಿಎನ್ಎನ್ ಟೌನ್ ಹಾಲ್ನಲ್ಲಿ ವಿವೇಕ್ ಮಾತನಾಡುತ್ತಿದ್ದಾಗ, ಅಮೆರಿಕ (America) ಹಿಂದೂ ಅಧ್ಯಕ್ಷರನ್ನು ಒಪ್ಪಿಕೊಳ್ಳಬಹುದೇ ಎಂಬ ಪ್ರಶ್ನೆ ಕೇಳಿಬಂತು.
ಅದಕ್ಕೆ ವಿವೇಕ್ ಪ್ರತಿಕ್ರಿಯಿಸಿ, ನನ್ನದು ‘ನಕಲಿ ಮತಾಂತರ’ ಅಲ್ಲ, ನಾನು ಹಿಂದೂ (Hinduism). ರಾಜಕೀಯ ವೃತ್ತಿಜೀವನವನ್ನು ಹೆಚ್ಚಿಸಲು ಸುಳ್ಳು ಹೇಳುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ, ಹಿಂದೂ ಧರ್ಮ ಮತ್ತು ಕ್ರಿಶ್ಚಿಯನ್ ಧರ್ಮ ಒಂದೇ ಸಮಾನ ಮೌಲ್ಯವನ್ನು ಹೇಳುತ್ತವೆ ಎಂದು ಪ್ರತಿಪಾದಿಸಿದ್ದಾರೆ.
Nail Cutting At Night: ರಾತ್ರಿ ಯಾಕೆ ಉಗುರು ಕತ್ತರಿಸಬಾರದು ಗೊತ್ತಾ..? ಇಲ್ಲಿದೆ ನೋಡಿ ಕಾರಣ
ನಾನು ನಕಲಿ ಮತಾಂತರ ಆಗಬಹುದು. ಆದರೆ ಅದನ್ನು ನಾನು ಮಾಡುವುದಿಲ್ಲ. ನನ್ನ ನಂಬಿಕೆಯ ಬಗ್ಗೆ ನಿಮಗೆ ಹೇಳುತ್ತೇನೆ. ನನ್ನ ಪಾಲನೆ ಸಾಕಷ್ಟು ಸಾಂಪ್ರದಾಯಿಕವಾಗಿತ್ತು. ಮದುವೆಗಳು ಪವಿತ್ರವೆಂದು ನನ್ನ ಪೋಷಕರು ನನಗೆ ಹೇಳುತ್ತಿದ್ದರು. ಕುಟುಂಬಗಳು ಸಮಾಜದ ಮೂಲಾಧಾರವಾಗಿದೆ ಎಂದು ತಿಳಿಸಿದ್ದಾರೆ.
ದೇವರು ಎಂಬುದು ಸತ್ಯ. ದೇವರ ಹೆಸರನ್ನು ವ್ಯರ್ಥವಾಗಿ ತೆಗೆದುಕೊಳ್ಳಬೇಡಿ. ನಿಮ್ಮ ಹೆತ್ತವರನ್ನು ಗೌರವಿಸಿ. ಕೊಲ್ಲಬೇಡಿ, ಸುಳ್ಳು ಹೇಳಬೇಡಿ, ಮೋಸ ಮಾಡಬೇಡಿ, ಕದಿಯಬೇಡಿ. ವ್ಯಭಿಚಾರ ಮಾಡಬೇಡಿ, ಆಸೆಪಡಬೇಡ. ನಾವು ಒಂದೇ ಮೌಲ್ಯವನ್ನು ಸಾಮಾನ್ಯವಾಗಿ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ.