ಬೆಂಗಳೂರು: ಬಿಜೆಪಿ ಮೇಲೆ 40% ಆರೋಪ ಮಾಡಿದ್ದು ಗುತ್ತಿಗೆದಾರ ಸಂಘದವರು, ನಾವಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಮೇಲೆ 40% ಆರೋಪ ಮಾಡಿದ್ದು ಗುತ್ತಿಗೆದಾರ ಸಂಘದವರು, ನಾವಲ್ಲ. ಮೊದಲು ಗುತ್ತಿಗೆದಾರರ ಸಂಘ ಆರೋಪ ಮಾಡಿತ್ತು. ಆಮೇಲೆ ನಾವು ಹೇಳಿದ್ದು. ಹಿಂದಿನ ಸರ್ಕಾರದವರು ಕಮಿಷನ್ ತೆಗೆದುಕೊಳ್ಳುತ್ತಿದ್ದರು ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.
ಇನ್ನೂ ಕೇಂದ್ರ ಸಚಿವ ಕುಮಾರಸ್ವಾಮಿ ಸರ್ಕಾರದ ಮೇಲೆ 60% ಕಮೀಷನ್ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಮೇಲೆ ಆರೋಪ ಮಾಡುವ ಕುಮಾರಸ್ವಾಮಿ ಏನು ದಾಖಲಾತಿ ಕೊಟ್ಟಿದ್ದಾರೆ? ಅವರು ದಾಖಲಾತಿ ಕೊಟ್ಟು ಆರೋಪ ಮಾಡಿದ್ದಾರಾ? ಎಂದು ಪ್ರಶ್ನೆ ಮಾಡಿದ್ದರು.