ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದೆ. ಅದರಲ್ಲೂ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನಾಗರಹೊಳೆ ಉದ್ಯಾನದ ಕಾಡಂಚಿದಲ್ಲಿರುವ ಬಿಲ್ಲೇನಹೊಸಹಳ್ಳಿ ಗ್ರಾಮದ ರೈತ ಚಿನ್ನದೊರೆ ಮತ್ತು ವೆಂಕಟೇಶ್ ಅವರಿಗೆ ಸೇರಿದ ಜಮೀನಿಗೆ ಆನೆ ನುಗ್ಗಿ ರಾಗಿ, ಮುಸುಕಿನ ಜೋಳ, ಮರಗೆಣಸು ಬೆಳೆ ನಾಶ ಮಾಡಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿ ಮಾಡಿದ ಬಿ.ವೈ.ವಿಜಯೇಂದ್ರ!
ಬೆಳೆ ತಿಂದು ತುಳಿದು ನಾಶ ಮಾಡಿದ ಕಾಡಾನೆಗಳು ವಾಸದ ಮನೆ ಮೇಲೂ ದಾಳಿ ಮಾಡಿವೆ. ಕಾಡಾನೆಗಳು ಮನೆ ಅಂಗಳದಲ್ಲಿ ಡ್ರಮ್ ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಹೋಗಿವೆ. ಕೂಟದ ಕಡ, ತಟ್ಟೆ ಹಳ್ಳ ಪಾರೆ ಭಾಗದಿಂದ ಈ ಆನೆಗಳು ಬಂದಿವೆ ಎನ್ನಲಾಗಿದೆ. ರೈಲ್ವೆ ಬ್ಯಾರಿಕೇಡ್ ಬೇಲಿ ದಾಟಿ ಬಂದಿರುವ ಗಜಪಡೆ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.