ಬೆಂಗಳೂರು: ಮಗುವನ್ನು ಅಕ್ರಮವಾಗಿ ಮನೆಯಲ್ಲಿ ಇಟ್ಟುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ಸೋನು ಶ್ರೀನಿವಾಸ್ ಗೌಡ ಅವರ ವಿಚಾರಣೆಯನ್ನು (Interrogation) ಪೊಲೀಸರು ಮುಂದುವರೆಸಿದ್ದಾರೆ. ಸ್ಥಳ ಮಹಜರಗಾಗಿ ಅವರನ್ನು ಇಂದು ರಾಯಚೂರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನಲ್ಲಿರುವ ಸೋನು ಮನೆ ಮತ್ತು ರಾಯಚೂರಿನ ಹಳ್ಳಿಯೊಂದರಲ್ಲಿರುವ ಆ ಬಾಲಕಿ ಮನೆಗೆ ಸೋನುವನ್ನು ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
BIGG News: 5, 8, 9ನೇ ತರಗತಿಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟ: ಗೊಂದಲಕ್ಕೆ ತೆರೆ ಎಳೆದ ಶಿಕ್ಷಣ ಇಲಾಖೆ!
ನಿನ್ನೆಯಷ್ಟೇ ಸೋನು ಶ್ರೀನಿವಾಸ್ ಗೌಡರನ್ನು (Sonu Srinivas Gowda) 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ ಬೆಂಗಳೂರಿನ ಸಿಜೆಎಂ ಕೋರ್ಟ್. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನು ಗೌಡ ಫಸ್ಟ್ ರಿಯಾಕ್ಷನ್ ಕೂಡ ಕೊಟ್ಟಿದ್ದಾರೆ.
ಪೊಲೀಸ್ ವಾಹನದಲ್ಲಿ ತೆರಳುವುದಕ್ಕೂ ಮುನ್ನ ಮಾಧ್ಯಮಗಳ ಎದುರು ಸೋನು ಶ್ರೀನಿವಾಸ್ ಗೌಡ ಹೇಳಿಕೆ ನೀಡಿದ್ದಾರೆ. ಲೀಗಲ್ ಆಗಿ ತನಿಖೆ ನಡೆಯುತ್ತಿದೆ. ಏನೂ ತೊಂದರೆ ಇಲ್ಲ. ಒಂದು ಹುಡುಗಿಯನ್ನು ರಕ್ಷಣೆ ಮಾಡೋಕೆ ಅಂತ ನಾನು ಕರೆದುಕೊಂಡು ಬಂದಿದ್ದು. ಅವಳು ಈಗಲೂ ಆರಾಮಾಗಿ, ಸುರಕ್ಷಿತವಾಗಿ ಇದ್ದಾಳೆ ಎಂದು ಸೋನು ಗೌಡ ಹೇಳಿದ್ದಾರೆ. ಕೇಸ್ಗೆ ಸಂಬಂಧಪಟ್ಟಂತೆ ಅವರನ್ನು ರಾಯಚೂರಿಗೆ ಕರೆದುಕೊಂಡು ಹೋಗಿ ಪೊಲೀಸರು ತನಿಖೆ ಮಾಡಲಿದ್ದಾರೆ. ಮಾರ್ಚ್ 25ರಂದು ಅವರನ್ನು ಕೋರ್ಟ್ಗೆ ಹಾಜರುಪಡಿಸಬೇಕಿದೆ. ನಿಯಮ ಪಾಲಿಸದೇ ಮಗು ದತ್ತು ಪಡೆದ ಆರೋಪದಲ್ಲಿ ಅವರು ಈಗ ಕಾನೂನು ಸಂಕಷ್ಟ ಎದುರಿಸಬೇಕಾಗಿದೆ