ನೆಲಮಂಗಲ: ನೆಲಮಂಗಲದಲ್ಲಿ ಚಿರತೆ ದಾಳಿ ಮುಂದುವರಿದಿದೆ. ಹೆಸರುಘಟ್ಟದ ತೋಟಗಾರಿಕೆಯಲ್ಲಿ ಚಿರತೆ ಕಂಡುಬಂದಿದ್ದು, ಐವರಕಂಡವಪುರದ ತೋಟಗಾರಿಕೆ ಪ್ರದೇಶದ ಮೇಲೆ ಚಿರತೆ ಪ್ರತ್ಯೇಕ ದಾಳಿ ಮಾಡಿದೆ.
ನೆನ್ನೆ ಸಂಜೆ ಹಸುವಿನ ದಾಳಿ ಮಾಡಿದ್ದ ಚಿರತೆ ಮತ್ತೆ ದಾಳಿ ಮಾಡಿ ಜನರಲ್ಲಿ ಆತಂಕ ಮೂಡಿಸಿದೆ. ಐವರಕಂಡರಪುರ ಹೆಸರುಘಟ್ಟ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಚಿರತೆ ದಾಳಿಯಿಂದ ಸಾರ್ವಜನಿಕರು ಭಯ ಬೀಳುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಹಿಡಿಶಾಪ ಹಾಕುತ್ತಿದ್ದಾರೆ. ಹಳ್ಳಿ ಪ್ರದೇಶದಿಂದ ಕೂಡಿರುವ ಹೂರು ನಗರದತ್ತ ಚಿರತೆ ಪ್ರವೇಶ ಮಾಡುತ್ತಿದ್ದು, ನಗರಕ್ಕೆ ಪ್ರವೇಶ ಮಾಡಿದ್ರೆ ಬಾರಿ ಅನಾಹುತ ಆಗುವ ಸಾಧ್ಯತೆ ಇದೆ.