ಬೆಳಗಾವಿ:- ಬೆಳಗಾವಿಯ ಉದ್ಯಮಬಾಗ ಠಾಣೆಯಲ್ಲಿ ವಿಚಿತ್ರ ಘಟನೆಯೊಂದು ಜರುಗಿದೆ. ಡ್ಯೂಟಿ ಬದಲಿಸಿದ್ದಕ್ಕೆ ಪೊಲೀಸ್ ಕಾನ್ಸ್ಟೇಬಲ್ ಮುದಕಪ್ಪ ಉದಗಟ್ಟಿ ಎಂಬವರು ಆತ್ಮಹತ್ಯೆಯ ನಾಟಕ ಮಾಡಿದ್ದಾನೆ.
ಬಾಗಲಕೋಟೆ: ಮನೆಯೊಳಗೆ ನುಗ್ಗುತ್ತಿರುವ ಚರಂಡಿ ನೀರು, ಸ್ವಚ್ಚತೆ ಮಾಡದೆ ಪ್ರರಸಭೆ ಅಧಿಕಾರಿಗಳ ನಿರ್ಲಕ್ಷ್ಯ!
ಮುದಕಪ್ಪ ಎರಡು ದಿನ ರಜೆ ಹೋಗಿ ಬಂದಿದ್ದರು. ಹೀಗಾಗಿ ಅವರಿಗೆ ಪಿಐ ಡ್ಯೂಟಿ ಬದಲಿಸಿದ್ದರು. ಕರ್ತವ್ಯ ನಿಯೋಜಿಸಿದ ಜಾಗಕ್ಕೆ ಹೋಗಬೇಕೆಂದು ಸೂಚನೆ ನೀಡಿದ್ದರು. ಆದರೆ ಇದಕೊಪ್ಪದ ಮುದಕಪ್ಪ, ವಿಷ ಸೇವಿಸುತ್ತೇನೆ ಎಂದು ಹೇಳಿದ್ದಲ್ಲದೆ ದಾಳಿಯಲ್ಲಿ ಬಿದ್ದು ಹೊರಳಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಯಲಾಗಿದ್ದು ಆರೋಗ್ಯ ತಪಾಸಣೆ ಮಾಡಲಾಗಿದೆ. ಪರೀಕ್ಷೆ ನಡೆಸಿದ ವೈದ್ಯರು, ಮುದಕಪ್ಪ ವಿಷ ಸೇವಿಸಿಲ್ಲ ಎಂದು ದೃಢಪಡಿಸಿದ್ದಾರೆ. ಬಳಿಕ ಮೇಲಧಿಕಾರಿಗಳು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.
ಮುದಕಪ್ಪ ಅವಾಂತರದಿಂದಾಗಿ ಠಾಣೆಯ ಪಿಐ ಡಿಕೆ ಪಾಟೀಲ್ ಲೋ ಬಿಪಿ ಆಗಿ ಆಸ್ಪತ್ರೆ ಸೇರುವಂಥ ಆಗಿದೆ! ಘಟನೆ ಬಗ್ಗೆ ಇದೀಗ ಬೆಳಗಾವಿ ಪೊಲೀಸ್ ಆಯುಕ್ತ ಯುಡಾ ಮಾರ್ಟಿನ್ ಅವರಿಗೂ ಮಾಹಿತಿ ನೀಡಲಾಗಿದೆ.