ಬೆಂಗಳೂರು:- ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸೋ ಷಡ್ಯಂತ್ರ ನಡೆದಿದೆ ಎಂದು DCM ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಬಿಜೆಪಿ ಅವರು ಆಫರ್ ಕೊಡ್ತಿರೋದು ನಿಜ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಆರೋಪವನ್ನು ಸಮರ್ಥನೆ ಮಾಡಿಕೊಂಡರು.
ಬಿಜೆಪಿ ಅವರು 50 ಕೋಟಿ ಅಫರ್ ನಮ್ಮ ಶಾಸಕರಿಗೆ ಮಾಡ್ತಿದ್ದಾರೆ. ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದೆ ತಿಳಿಸುತ್ತೇನೆ ಎಂದರು.
ಬಿಜೆಪಿ ಅವರು 50 ಕೋಟಿ ಅಫರ್ ನಮ್ಮ ಶಾಸಕರಿಗೆ ಮಾಡ್ತಿದ್ದಾರೆ. ನಮ್ಮ ಶಾಸಕರ ಜೊತೆ ಬಿಜೆಪಿ ಅವರು ಮಾತಾಡಿದ್ದಾರೆ. ಅದನ್ನ ನಮ್ಮ ಶಾಸಕರು ಸಿಎಂಗೆ ತಿಳಿಸಿದ್ದಾರೆ. ಮಿಕ್ಕಿದ ವಿಚಾರ ನಾನು ಮುಂದೆ ತಿಳಿಸುತ್ತೇನೆ ಎಂದರು.
ನಮ್ಮ ಪಕ್ಷದ 50 ಶಾಸಕರಿಗೆ ತಲಾ 50 ಕೋಟಿ ಆಫರ್ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದರು. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದು ‘ಕೈ’ ನಾಯಕರು ಕಿಡಿಕಾರಿದ್ದಾರೆ.