ಬೆಂಗಳೂರು:- ಕರವೇ ಅಧ್ಯಕ್ಷರ ಬಿಡುಗಡೆ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿವೆ ಎಂದು ನಾರಾಯಣಗೌಡ ಪರ ವಕೀಲ ಕುಮಾರ್ ಆರೋಪ ಮಾಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕರವೇ ನಾರಾಯಣ ಗೌಡ ಬಿಡುಗಡೆಗೆ ವಿಳಂಬ ಮಾಡಲಾಗುತ್ತಿದೆ. ಬೇಲ್ ಕಾಫಿ ಸಕಾಲಕ್ಕೆ ಜೈಲು ಅಧಿಕಾರಿಗಳ ಕೈ ಸೇರಿದ್ರು ಬಿಡುಗಡೆ ಮಾಡಿಲ್ಲ ಎಂದು ಕರವೇ ನಾರಾಯಣ ಗೌಡ ಪರ ವಕೀಲ ಕುಮಾರ್ ಆರೋಪ ಮಾಡಿದ್ದಾರೆ.
ನಾರಾಯಣ ಗೌಡರ ಬಿಡುಗಡೆ ವಿಚಾರದಲ್ಲಿ ಷಡ್ಯಂತ್ರ ನಡೆಯುತ್ತಿದೆ. ಜೈಲು ಅಧಿಕಾರಿಗಳು ಚರ್ಚೆ ಮಾಡುತ್ತಿದ್ದೆವೆ ಎನ್ನುತ್ತಿದ್ದಾರೆ. 6:30 ರ ಸುಮಾರಿಗೆ ಬೇಲ್ ಕಾಪಿ ಜೈಲು ಅಧಿಕಾರಿಗಳ ಕೈ ಸೇರಿದೆ. ಆದರೂ ಜೈಲು ಅಧಿಕಾರಿಗಳು ಬಿಡುಗಡೆಗೆ ಮೀನಾಮೇಷ ಎಣಿಸಲಾಗುತ್ತಿದೆ.
ಕಾನೂನು ಸುವ್ಯವಸ್ಥೆ ಹದಗೇಡುತ್ತದೆ ಎಂಬ ಉದ್ದೇಶವಿರಬಹುದು ರಾತ್ರಿ 10:30ವರೆಗೂ ಬಿಡುಗಡೆಗೆ ಅವಕಾಶವಿದೆ ಎಂದರು.
ಇನ್ನೂ ಹಳೆಯ ಕೇಸ್ಗಳಲ್ಲಿ ಕರವೇ ನಾರಾಯಣ ಗೌಡ ಬಂಧಿಸುವ ವಿಚಾರವಾಗಿ ಮಾತನಾಡಿ, ಇಲ್ಲಿಯವರೆಗೆ ಯಾವುದೇ ಠಾಣಾ ಪೊಲೀಸರು ಬಾಡಿ ವಾರಂಟ್ ಪಡೆದಿಲ್ಲ. ಯಾವ ಆಧಾರದ ಮೇಲೆ ಗೌಡರ ಬಂಧನಕ್ಕೆ ತಯಾರಿ ನಡೆಸಿದ್ದಾರೋ ಗೊತ್ತಿಲ್ಲ. ಹಲಸೂರು ಗೇಟ್ ಠಾಣೆ ಕೇಸ್ ಬೇಲೆಬಲ್ ಅಫೆನ್ಸ್ ಇದೆ, ಆದ್ರೆ ಕುಮಾರಸ್ವಾಮಿ ಲೇಔಟ್ ಠಾಣೆ ಕೇಸ್ ನಾನ್ ಬೇಲೆಬಲ್ ಅಫೇನ್ಸ್ ನೀಡಲಾಗಿದೆ.
ಒಂದು ವೇಳೆ ನಾರಾಯಣ ಗೌಡರನ್ನು ಬಂಧಿಸಿದ್ರೆ. ಕಾನೂನು ಹೋರಾಟ ಮಾಡಲಾಗುವುದು. ವಕೀಲರ ತಂಡ ಸಮರ್ಥವಾಗಿ ವಾದ ಮಂಡನೆ ಮಾಡಿ. ಬಂಧನವಾದ್ರೆ ನಾಳೆಯೇ ಜಾಮೀನು ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.