ಬೆಂಗಳೂರು:- ಶಾಸಕ ವಿನಯ ಕುಲಕರ್ಣಿ ಅವರ ವಿರುದ್ದ ಮತ್ತೊಂದು ಷಡ್ಯಂತ್ರ ನಡೆಯಿತೇ ಅನ್ನೋ ಮಾತುಗಳು ಕೇಳಿಬರುತ್ತಿವೆ.ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ಎರಡು ದಿನಗಳಿಂದ ಅವರ ಮೇಲೆ ಬಂದಿರುವ ಆರೋಪ.
..ಆ ಆರೋಪದ ಹಿಂದೆ ಇರುವವರು ಯಾರು.?ಅನ್ನೋದು ನಿಮಗೆ ಗೊತ್ತಾಗುತ್ತೇ ಅಂತ ಸ್ವತ: ವಿನಯ ಕುಲಕರ್ಣಿ ಅವರೇ ಹೇಳಿದ್ದಾರೆ ಕೇಳಿ…
ದತ್ತಾತ್ರೇಯ ವಿಗ್ರಹ ಭಗ್ನ: ರಾಜ್ಯ ಸರ್ಕಾರದ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ!
ಶಾಸಕ ವಿನಯ ಕುಲಕರ್ಣಿ ತಮ್ಮ ವಿಡಿಯೋ ಹಾಗೂ ಮೋಬೈಲ್ ಸಂಭಾಷಣೆ ಪ್ರಸಾರ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಶಾಸಕ ವಿನಯ ಕುಲಕರ್ಣಿ.ಮಂಜುಳಾ ಪೂಜಾರ ಹಾಗೂ ಖಾಸಗಿ ವಾಹಿನಿ ವಿರುದ್ದ ಬೆಂಗಳೂರಿನ ಸಂಜಯ ನಗರ ಪೋಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಜುಳಾ ಪೂಜಾರ ಎರಡು ವರ್ಷಗಳ ಹಿಂದೆ ರೈತ ಹೋರಾಟಗಾರತಿ ಎಂದು ಹೇಳಿಕೊಂಡು ಪೋನ್ ಕರೆ ಮಾಡಿದ್ದಳು.ನಂತರ ಅವಳ ವಿರುದ್ದ ಖಾಸಗಿ ವಾಹಿನಿಯಲ್ಲಿ ಸುದ್ದಿ ಪ್ರಸಾರವಾದ ನಂತರ ಆಕೆಯ ಜೊತೆ ಎಂದೂ ಮಾತಾಡಿಲ್ಲಾ ಎಂದು ಬೆಂಗಳೂರಿನ ಸಂಜಯ ನಗರ ಪೋಲೀಸ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಅಲ್ಲದೇ ನಾನು ಅವಳನ್ನ ಟಚ್ ಮಾಡಿದ್ದರೆ ನನ್ನ ತಾಯಿ ಟಚ್ ಮಾಡಿದಂತೆ.ಯಾವಾಗೋ ಒಂದ ಸಲ ವಿಡಿಯೋ ಕಾಲ್ ಮಾಡಿದ್ದನ್ನ ಈಗ ಅದನ್ನು ತಿರುಚಿ ಹೀಗೆ ಮಾಡತಾ ಇದ್ದಾರೆ ಇದೊಂದು ರಾಜಕೀಯ ಷಡ್ಯಂತ್ರ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.
ಈ ನಡುವೆ ಶಾಸಕ ವಿನಯ ಕುಲಕರ್ಣಿ ವಿರುದ್ದ ಬೆಂಗಳೂರು ಹೆಬ್ಬಾಳ ಪೋಲೀಸ ಠಾಣೆಯಲ್ಲಿ ಅವಳೂ ಕೂಡಾ ದೂರು. ನೀಡಿದ್ದಾಳೆ.