ಸಂಕೇಶ್ವರ:– ನನ್ನ ವಿರುದ್ಧ ಕಾಣದ ಕೈಗಳು ಹಾಗೂ ಇಲಾಖೆಯವರೆ ಷಡ್ಯಂತ್ರ ರೂಪಿಸಿ ನನ್ನ ಮೇಲೆ ಮಹಿಳೆ ಕಿರುಕುಳ ದೂರ ನೀಡುವಂತೆ ಕೆಲಸ ಮಾಡಿದ್ದಾರೆ ಎಂದು ಅಮಾನತುಗೊಂಡ ಸಂಕೇಶ್ವರ ಪಿಎಸ್ ಐ ನರಸಿಂಹರಾಜು ಜೆ. ಡಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಸಂಕೇಶ್ವರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ನಾನು ಯಾವುದೇ ತಪ್ಪು ಮಾಡಿಲ್ಲ. ಸಿಪಿಐ ಶಿವಶರಣ ಅವಜಿ ಹಾಗೂ ಇಲಾಖೆಯ ಸಿಬ್ಬಂದಿಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೆನೆ ಎಂದು ನರಸಿಂಹರಾಜು ಆರೋಪಿಸಿದ್ದಾರೆ.