ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಸರ್ವೋಚ್ಛ ನ್ಯಾಯಾಲಯ ಕೂಡ ದೆಹಲಿಯಲ್ಲಿ ಶಾಶ್ವತ ಪಟಾಕಿ ನಿಷೇಧದ ಕುರಿತು ಪೊಲೀಸರಿಗೆ ಹಲವು ಪ್ರಶ್ನೆಗಳ ಮುಂದಿಟ್ಟಿದೆ. ಜಸ್ಟೀಸ್ ಅಭಯ್ ಓಕಾ, ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಯಾವುದೇ ಧರ್ಮವು ಮಾಲಿನ್ಯವನ್ನು ಪ್ರೋತ್ಸಾಹಿಸುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್ ಯಾವುದೋ ಒಂದೆರಡು ತಿಂಗಳುಗಳ ಕಾಲ ಪಟಾಕಿ ನಿಷೇಧಕ್ಕಿಂತ ಶಾಶ್ವತವಾಗಿ ಪಟಾಕಿ ನಿಷೇಧಿಸಬಾರದೇಕೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಹೊಸ ಮನೆ ಕಟ್ಟಿಸೋ ಪ್ಲ್ಯಾನ್ ಇದ್ಯಾ!? ಇನ್ಮುಂದೆ ಜಲಮಂಡಳಿಯ ಹೊಸ ರೂಲ್ಸ್ ಕಡ್ಡಾಯ!?
ಅಕ್ಟೋಬರ್ 14ರಂದು ಪಟಾಕಿ ನಿಷೇಧದ ಕುರಿತ ದೆಹಲಿ ಆದೇಶವನ್ನು ಸುಪ್ರೀಂಕೋರ್ಟ್ ಪರಿಶೀಲಿಸಿತು. ಈ ಆದೇಶದಲ್ಲಿ ಚುನಾವಣೆಗಳು ಮತ್ತು ಮದುವೆಗಳಂತಹ ಕಾರ್ಯಕ್ರಮಗಳಿಗೆ ಪಟಾಕಿ ಸಿಡಿಸಲು ವಿನಾಯ್ತಿ ನೀಡಿತ್ತು. ಇದನ್ನು ಪ್ರಶ್ನಿಸಿರುವ ಸುಪ್ರೀಂ, ಪಟಾಕಿ ಸಿಡಿಸುವುದರಿಂದಾಗಿ ನಾಗರೀಕರ ಆರೋಗ್ಯದ ಮೇಲೂ ಪರಿಣಾಮ ಬೀರುವುದು. ಅಕ್ಟೋಬರ್, ಜನವರಿ ತಿಂಗಳ ಮಧ್ಯೆ ಮಾತ್ರವೇ ಪಟಾಕಿಗೆ ನಿರ್ಬಂಧಗಳು ಏಕೆ ಎಂದು ಕೇಳಿದೆ. ಅಲ್ಲದೇ ಮಾಲಿನ್ಯ ನಿಯಂತ್ರಣವಾಗುವವರೆಗೂ ನಿರ್ದಿಷ್ಟ ಅವಧಿಗೆ ಸೀಮಿತವಾಗಿರದೆ ಒಂದು ವರ್ಷದ ಅವಧಿಯ ನಿಷೇಧದ ಅಗತ್ಯದ ಬಗ್ಗೆ ಹೇಳಿದ್ದು, ಪಟಾಕಿಗಳ ಮೇಲಿನ ಶಾಶ್ವತ ನಿಷೇಧವನ್ನು ಪರಿಗಣಿಸುವಂತೆ ಆದೇಶ ನೀಡಿದೆ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನವೆಂಬರ್ 25ರವರೆಗೂ ಗಡುವು ನೀಡಿದೆ.