ಜೈಪುರದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಹೀನಾಯವಾಗಿ ಸೋತ ಬಳಿಕ ಆರ್ಸಿಬಿ ಮುಂದಿನ ಪಂದ್ಯವಾಡಲು ಸಜ್ಜಾಗಿದೆ. ಸತತ ಸೋಲು ಕಂಡಿರುವ ಆಟಗಾರರು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ದೇವರ ಮೊರೆ ಹೋಗಿದ್ದಾರೆ.
ದಪ್ಪಗಿದ್ದವರು ಬೇಸಿಗೆಯಲ್ಲಿ ಸ್ಲಿಮ್ ಆಗಬಹುದು, ಜಸ್ಟ್ ಇದನ್ನು ಸೇವಿಸುತ್ತಾ ಬನ್ನಿ, ರಿಸಲ್ಟ್ ಗ್ಯಾರಂಟಿ!
ಆರ್ಸಿಬಿ ಆಟಗಾರರು ಸೋಮವಾರ ಮುಂಬೈನ ಪ್ರಸಿದ್ಧ ಶ್ರೀಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ವಿಜಯ್ ಕುಮಾರ್ ವೈಶಾಖ್, ಕರ್ಣ್ ಶರ್ಮಾ, ಮಯಾಂಕ್ ದಾಗರ್ ಮತ್ತು ಅನುಜ್ ರಾವತ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ
ಏಪ್ರಿಲ್ 11ರಂದು ಆರ್ಸಿಬಿ ಮುಂದಿನ ಪಂದ್ಯವನ್ನು ಆಡಲಿದೆ. ಪ್ಲೇ ಆಫ್ ತಲುಪಬೇಕು ಎಂದರೆ ಆರ್ಸಿಬಿಗೆ ಮುಂದಿನ ಪಂದ್ಯಗಳು ಸಾಕಷ್ಟು ಮಹತ್ವದ್ದಾಗಿವೆ. ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಗೆಲುವಿನ ಹಾದಿಗೆ ಬರಲು ಆರ್ಸಿಬಿ ಪ್ರಯತ್ನಿಸುತ್ತಿದೆ.
ಸತತ ಮೂರು ಪಂದ್ಯಗಳನ್ನು ಸೋತ ಬಳಿಕ ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವಿನ ಮೂಲಕ ಗೆಲುವಿನ ಖಾತೆ ತೆರೆದಿದೆ. ಸತತ ಮೂರು ಪಂದ್ಯ ಸೋತ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು, ಅದಾದ ಬಳಿಕ ಅವರ ತಂಡ ಗೆಲುವು ಸಾಧಿಸಿತ್ತು.
ದೇವಸ್ಥಾನಕ್ಕೆ ಭೇಟಿ ನೀಡಿದ್ದು ಪಾಂಡ್ಯ ಅವರ ಆತ್ಮವಿಶ್ವಾಸ ಹೆಚ್ಚಿಸಿತ್ತು. ಈಗ ಆರ್ಸಿಬಿ ಆಟಗಾರರು ಕೂಡ ಅದೇ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಗುರುವಾರ ಒಂದು ರೋಚಕ ಪಂದ್ಯವನ್ನು ಅಭಿಮಾನಿಗಳು ನಿರೀಕ್ಷೆ ಮಾಡಬಹುದಾಗಿದೆ.