ಹುಬ್ಬಳ್ಳಿ: ಕಾಂಗ್ರೆಸ್ನಿ೦ದ ಬೃಹತ್ ಪ್ರಮಾಣದಲ್ಲಿ ದುಡ್ಡಿನ ಹಾವಳಿ ನಡೆದಿದೆ. ಹೀಗಾಗಿ ಉಪ ಚುನಾವಣೆಯಲ್ಲಿ ನಮಗೆ ಸೋಲಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ಸಿ.ಪಿ. ಯೋಗೀಶ್ವರ 2 ಬಾರಿ ಸೋತಿದ್ದರು. ಅಲ್ಲಿ ಅನುಕಂಪ ಕೆಲಸ ಮಾಡಿದೆ. ಚನ್ನಪಟ್ಟಣದ ಜಯ ಕಾಂಗ್ರೆಸ್ ಜಯವಲ್ಲ. ಯೋಗೀಶ್ವರ ನಮ್ಮ ಪಕ್ಷದವರಾಗಿದ್ದರು ಎಂದರು.
ಸ೦ಡೂರಿನಲ್ಲಿ ಬಿಜೆಪಿ ಗೆಲ್ಲಬೇಕಿತ್ತು. ಆದರೆ, ಅಲ್ಲಿ ಕಾಂಗ್ರೆಸ್ ಒಂದು ಮತಕ್ಕೆ 2,500 ರೂಪಾಯಿ ಹಂಚಿದ್ದಾರೆ. ಆದರೂ ಅಲ್ಲಿ ಕಾಂಗ್ರೆಸ್ ಲೀಡ್ ಕಡಿಮೆಯಾಗಿದೆ. ವಾಲ್ಮೀಕಿ ನಿಗಮದ ಹಣ ಹೊಡೆದದ್ದು ಪ್ರಭಾವ ಬೀರಿದೆ ಎಂದರು.
ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!
ಶಿಗ್ಗಾ೦ವಿಯಲ್ಲಿ ಭರತ್ ಬೊಮ್ಮಾಯಿ ಗೆಲ್ಲುತ್ತಾರೆ ಎಂಬ ವಿಶ್ವಾಸ ಇತ್ತು. ಅಲ್ಲಿ 60 ಜನ ಟಿಕೆಟ್ ಆಕಾಂಕ್ಷಿಗಳಿದ್ದರು. ಪಕ್ಷದ ತೀರ್ಮಾನದಂತೆ ಭರತ್ ಬಿಜೆಪಿ ಅಭ್ಯರ್ಥಿಯಾಗಿದ್ದರು. ಅಲ್ಲ ಆಕಾಂಕ್ಷಿಗಳ ಅಸಮಾಧಾನ ಪ್ರಭಾವ ಬೀರಿರಬಹುದು. ನಾವು ಸೋತಿರುವ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ. ಪಕ್ಷದಲ್ಲಿರುವ ಅಸಮಾಧಾನದ ಕುರಿತು ಪಕ್ಷದ ಚೌಕಟ್ಟಿನಲ್ಲೇ ಚರ್ಚೆ ಮಾಡುತ್ತೇವೆ ಎಂದರು. ಆದರೆ ಮೂರು ಕಡೆಗಳಲ್ಲಿ ಹಣ ಬಲ ಸಾಕಷ್ಟು ಕೆಲಸ ಮಾಡಿದೆ ಎಂದರು.