ಬೆಂಗಳೂರು: ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡಲು ಸಿದ್ಧತೆ ಮಾಡಿಕೊಂಡಿತ್ತು. ಕುಮಾರಸ್ವಾಮಿ ಇಲ್ಲದೆ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ ಜೈಲಿನಲ್ಲಿ ಇರಬೇಕಾಗಿತ್ತು ಅಂತ ಮಾಜಿ ಸಚಿವ ಹೆಚ್.ಡಿ ರೇವಣ್ಣ ಬಾಂಬ್ ಸಿಡಿಸಿದ್ದಾರೆ. ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, 2017 ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಜಿ.ಟಿ ದೇವೇಗೌಡರನ್ನ ಬಂಧನ ಮಾಡಲು ಸಿದ್ಧತೆ ಮಾಡಿಕೊಂಡಿತ್ತು.
ಗಮನಿಸಿ.. ಗುರುವಾರದ ದಿನ ಅಪ್ಪಿ ತಪ್ಪಿಯೂ ಈ ಕೆಲಸಗಳನ್ನು ಮಾಡಲೇಬಾರದು..!?
ಈ ವಿಷಯವನ್ನು ನನಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ರು. ಬಳಿಕ ಕುಮಾರಸ್ವಾಮಿ ಅವರು ಪೊಲೀಸರಿಗೆ ಫೋನ್ ಮೂಲಕ ಗುಟುರು ಹಾಕಿದ್ರು. ಕುಮಾರಸ್ವಾಮಿಯವರ ಒಂದೇ ಒಂದು ಗುಟುರಿಗೆ ಪೊಲೀಸರು ಜಿ.ಟಿ ದೇವೇಗೌಡರನ್ನ ಅರೆಸ್ಟ್ ಮಾಡೋದು ಬಿಟ್ಟರು.
ಇಲ್ಲದೇ ಹೋಗಿದ್ರೆ ನನ್ನ ರೀತಿ ಜಿ.ಟಿ ದೇವೇಗೌಡ ಮತ್ತು ಅವರ ಪುತ್ರ 20 ದಿನ ಜೈಲಲ್ಲಿ ಕಳೆಯಬೇಕಾಗಿತ್ತು ಹೇಳಿದರು. ಯಾವ ಕೇಸ್ ಅಂತ ಈಗ ಇರೋ ಸರ್ಕಾರದಲ್ಲಿರೋ ನಾಯಕರನ್ನ ಕೇಳಿ ಅಂತ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿದ್ರು.