ಹುಬ್ಬಳ್ಳಿ: ವಿವಾದಿತ ಜಾಗವನ್ನು ಕಾಂಗ್ರೆಸ್ ಕಚೇರಿಯನ್ನು ನಿರ್ಮಿಸಿದ ಕೈ ಮುಖಂಡರು ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯ ಹೃದಯ ಭಾಗದಲ್ಲಿ ಇರುವ 50 ಕೋಟಿಗೂ ಅಧಿಕ ಮೌಲ್ಯದ ಜಾಗ ಕಾಂಗ್ರೆಸ್ ವಶಕ್ಕೆ ಪಡೆದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಹುಬ್ಬಳ್ಳಿ ಹೃದಯ ಭಾಗದಲ್ಲಿರುವ ಲ್ಯಾಮಿಂಗ್ಟನ್ ರಸ್ತೆಯಲ್ಲಿನ ಹಳೆಯ ಜೆಡಿಯು ಕಚೇರಿಯನ್ನು ಕಾಂಗ್ರೆಸ್ ನಾಯಕರು ಕಬ್ಜಾ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳ್ಳಂಬೆಳಗ್ಗೆಯೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬೋರ್ಡ್ ಹಾಕಿ ಕೈ ನಾಯಕರ ಪೋಟೋ ಇಟ್ಟು ಪೂಜೆ ಮಾಡಿದ್ದಾರೆ. ವಿವಾದಿತ ಜಾಗ ಈ ಮೊದಲು 1959 ರಲ್ಲಿ ಕಾಂಗ್ರೆಸ್ ಪಕ್ಷದ ಹೆಸರಿಗೆ ಸೇಲ್ ಡೀಡ್ ಆಗಿತ್ತು. ನಂತರ ಎಸ್.ಆರ್.ಬೊಮ್ಮಾಯಿ ಕಾಲದಲ್ಲಿ ಜೆಡಿಯು ಕಚೇರಿಯಾಗಿ ಮಾರ್ಪಾಡು ಆಗಿತ್ತು. ಇದೀಗ ಮತ್ತೆ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಸಾಕಷ್ಟು ವಿವಾದವನ್ನು ಸೃಷ್ಟಿಸಿರುವ ಜಾಗೆಯ ಕಬ್ಜಾ ಪಡೆದಿರುವುದು ಸಾಕಷ್ಟು ಸುದ್ಧಿಯಾಗಿದೆ. ಈ ಬಗ್ಗೆ ಶಾಸಕ ಪ್ರಸಾದ್ ಅಬ್ಬಯ್ಯ ಪ್ರತಿಕ್ರಿಯೆ ನೀಡಿದ್ದು, ನಮ್ಮದೇ ಕಚೇರಿಯಲ್ಲಿ ನಾವು ಪೂಜೆ ಮಾಡಿದ್ದೇವೆ.1956 ರಲ್ಲಿಯೇ ಚನ್ನಬಸಪ್ಪ ಅಂಬಲಿ ಅವರು ಈ ಸ್ಥಳ ಖರೀದಿಸಿದ್ದರು. ಕೆಪಿಸಿಸಿ ವತಿಯಿಂದ ಖರೀದಿ ಮಾಡಲಾಗಿತ್ತು. ಕಾಂಗ್ರೆಸ್ ಕಚೇರಿಯನ್ನು ನಿರ್ಮಾಣ ಮಾಡಲು ಇಂದು ಪೂಜೆ ಮಾಡಿದ್ದೇವೆ. ಹಿಂದೆ ಜೆಡಿಯು ನವರು ಅಕ್ರಮವಾಗಿ ಇಲ್ಲಿ ಪ್ರವೇಶ ಮಾಡಿದ್ದರು ಪಹಣಿಯಲ್ಲಿ ನಮ್ಮದೇ ಹೆಸರಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.