ಬೆಂಗಳೂರು:- ಡಿಕೆ ಮುಂದಿನ ಸಿಎಂ ಕೂಗಿಗೆ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜು ಧ್ವನಿಗೂಡಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ನಿಲ್ಲಿಸಿದ್ರೆ ನಡು ರಸ್ತೆಯಲ್ಲೇ ಜನ ಹೊಡಿತಾರೆ: ಕೆಎಸ್ ಈಶ್ವರಪ್ಪ!
ಡಿ.ಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ. ಒಳ್ಳೇ ದಿನ ಬಂದೇ ಬರುತ್ತೆ. ನಾವು ಅವರ ಪರ ಇರುತ್ತೇವೆ ಎಂದು ಕಿಚ್ಚು ಹೊತ್ತಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಎಂದ ಶಿವಗಂಗಾ ಬಸವರಾಜು, ಕುರ್ಚಿ ಖಾಲಿಯಾದಾಗ ಕ್ಲೈಮ್ ಮಾಡೇ ಮಾಡುತ್ತೇವೆ ಎಂದಿದ್ದಾರೆ. ಸಚಿವರು ಅಧಿಕಾರಕ್ಕಾಗಿ ಮಾತನಾಡ್ತಿದ್ದಾರೆ. ಮಾತನಾಡುತ್ತಿರುವರು ಆಪರೇಷನ್ ಮಾಡಿ ನಾಲ್ಕು ಜನರನ್ನ ಕರೆದುಕೊಂಡು ಬರಲಿ ಎಂದು ಸವಾಲ್ ಹಾಕಿದ್ದಾರೆ. ಮತ್ತೊಂದೆಡೆ ಮಾತನಾಡಿರೋ ಸಚಿವ ಕೆ.ಎನ್ ರಾಜಣ್ಣ, ಪವರ್ ಶೇರಿಂಗ್ ವಿಚಾರ ಹೈಕಮಾಂಡ್ಗೆ ಬಿಟ್ಟದ್ದು ಎಂದಿದ್ದಾರೆ. ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕಿಲ್ಲ ಅಂತಾ ಕೊಟ್ರೆ ನಿಭಾಯಿಸ್ತೀನಿ ಎಂದು ಹೇಳಿದ್ದಾರೆ.
ಇನ್ನೂ ಕರ್ನಾಟಕ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿವೆ. ಒಂದೆಡೆ ಡಿಕೆ ಶಿವಕುಮಾರ್ಗೆ ಸಿಎಂ ಹುದ್ದೆ ನೀಡುವ ಕುರಿತು ಚರ್ಚೆ ಶುರುವಾಗಿದ್ದರೆ, ಮತ್ತೊಂದೆಡೆ ಸಂಪುಟ ವಿಸ್ತರಣೆ ಸುದ್ದಿ ಮುನ್ನಲೆಗೆ ಬಂದಿದೆ. ಹಾಗೇ ಒಕ್ಕಲಿಗರ ಸಂಘ ಸಹ ಸಿಎಂ ವಿಚಾರವಾಗಿ ಡಿಕೆ ಶಿವಕುಮಾರ್ ಪರ ಬಹಿರಂಗವಾಗಿ ಬ್ಯಾಟಿಂಗ್ ಮಾಡಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಕಾಂಗ್ರೆಸ್ ಹಿರಿಯ ನಾಯಕರು ಸಹ ಬೇಸರ ವ್ಯಕ್ತಪಡಿಸಿದ್ದಾರೆ.