ನವದೆಹಲಿ: ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ ಎಂದು ಕರ್ನಾಟಕದ ವಕ್ಫ್ ವಿವಾದ ಉಲ್ಲೇಖಿಸಿ ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ಬಟರ್ ಫ್ರೂಟ್ ಹಣ್ಣಿನಲ್ಲಿದೆ ಹಲವು ರೀತಿಯ ಬೆನಿಫಿಟ್: ದಿನಕ್ಕೊಂದು ಸೇವಿಸಿ!
ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್ಬ್ಯಾಂಕ್ ಹೆಚ್ಚಿಸಲು ಹೀಗೆ ಮಾಡಿದೆ. ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಕಾನೂನು ಮಾಡಿದೆ. ಸುಪ್ರೀಂ ಕೋರ್ಟ್ನ ಆದೇಶದ ಬಗ್ಗೆಯೂ ಅವರು ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಉದಾಹರಣೆ ವಕ್ಫ್ ಬೋರ್ಡ್. ದೆಹಲಿಯ ಜನರು ಆಶ್ಚರ್ಯ ಪಡುತ್ತಾರೆ. 2014 ರಲ್ಲಿ ಸರ್ಕಾರವನ್ನು ತೊರೆಯುವ ಮೊದಲು, ಈ ಜನರು ದೆಹಲಿ ಮತ್ತು ಸುತ್ತಮುತ್ತಲಿನ ಅನೇಕ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಹಸ್ತಾಂತರಿಸಿದ್ದರು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಸಂವಿಧಾನದಲ್ಲಿ ವಕ್ಫ್ ಕಾನೂನಿಗೆ ಸ್ಥಾನವಿಲ್ಲ. ಆದರೆ, ಕಾಂಗ್ರೆಸ್ ತನ್ನ ವೋಟ್ಬ್ಯಾಂಕ್ ಹೆಚ್ಚಿಸಲು ಹೀಗೆ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರವಿಲ್ಲದೇ ಕಾಂಗ್ರೆಸ್ ಕುಟುಂಬ ಬದುಕಲು ಸಾಧ್ಯವಿಲ್ಲ. ಚುನಾವಣೆ ಗೆಲ್ಲಲು ಏನು ಬೇಕಾದರೂ ಮಾಡಬಹುದು. ಇಂದು, ಕಾಂಗ್ರೆಸ್ನ ನಗರ ನಕ್ಸಲಿಸಂ ಭಾರತಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ. ಅರ್ಬನ್ ನಕ್ಸಲೀಯರ ರಿಮೋಟ್ ಕಂಟ್ರೋಲ್ ದೇಶದ ಹೊರಗಿದ್ದು, ಈ ಅರ್ಬನ್ ನಕ್ಸಲಿಸಂ ಬಗ್ಗೆ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕಿದೆ. ಇಂದು ದೇಶದ ಯುವಜನತೆ, ಪ್ರತಿಯೊಬ್ಬರೂ ಕಾಂಗ್ರೆಸ್ನ ವಾಸ್ತವವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಮೋದಿ ಎಚ್ಚರಿಸಿದರು.