ನವದೆಹಲಿ:-ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2025ರಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಅವರು ಮಂಡನೆ ಮಾಡಿರುವ 8ನೇ ಬಜೆಟ್ ಆಗಿದೆ. ಈ ಮೂಲಕ ಅತೀ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದ್ದಾದಾರೆ.
Neck Pain: ವಿಪರೀತ ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ..? ಹಾಗಾದ್ರೆ ಇಲ್ಲಿದೆ ನೋಡಿ ಪರಿಹಾರ!
ಕೇಂದ್ರದ ಬಜೆಟ್ ಮಂಡನೆಯಾಗಿದ್ದು, ಈ ಬಾರಿಯ ಆಯವ್ಯಯದಲ್ಲಿ ಬಿಹಾರಕ್ಕೆ ಬಂಪರ್ ಕೊಡುಗೆಗಳನ್ನು ನೀಡಿದೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ.. ಇದು ಕೇಂದ್ರದ ಬಜೆಟ್ ಅಲ್ಲ ಬಿಹಾರ ಬಜೆಟ್ ಅಂತಾ ವಿಪಕ್ಷಗಳು ದೂರಿವೆ. ಬಿಹಾರಕ್ಕೆ ಒಂದಲ್ಲ ಎರಡಲ್ಲ ಭರಪೂರ ಕೊಡುಗೆ ಕೊಡೋಕೆ ಕಾರಣ ಚುನಾವಣೆ ಅಂದರೆ ತಪ್ಪಾಗಲ್ಲ..
ಹೌದು, ಸದ್ಯ ಬಿಹಾರ ಚುನಾವಣೆಯನ್ನು ಎದುರು ನೋಡುತ್ತಿದೆ. 2025ರ ಅಂತ್ಯದ ವೇಳೆಗೆ ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೇ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಬಜೆಟ್ ನಲ್ಲಿ ಬಿಹಾರಕ್ಕೆ ಪ್ರಾಧಾನ್ಯ ನೀಡಲಿದೆ ಎನ್ನಲಾಗುತ್ತಿದೆ.
ಇಂದು ಸಂಸತ್ನಲ್ಲಿ ತಮ್ಮ 8ನೇ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಬಿಹಾರ ರಾಜ್ಯಕ್ಕೆ ಭರ್ಜರಿ ಗಿಫ್ಟ್ ಗಳನ್ನು ನೀಡಿದ್ದಾರೆ. ಪಾಟ್ನಾ ಸೇರಿ 5 ಐಐಟಿಗಳ ಅಭಿವೃದ್ಧಿಗಳ ಅನುದಾನ ಕೊಡಲಾಗಿದೆ. ಅಲ್ಲದೇ ಬಿಹಾರಕ್ಕೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಮಂಜೂರು ಮಾಡಲಾಗಿದೆ. ಬಿಹಾರದ 500 ಹೆಕ್ಟೇರ್ ಜಮೀನಿಗೆ ನೀರಾವರಿ ಯೋಜನೆಯನ್ನು ಅಭಿವೃದ್ಧಿ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದಲ್ಲದೇ ಮಕಾನ್ ಮಂಡಳಿ, ಆಹಾರ ಸಂಸ್ಕರಣೆಗೆ ಆದ್ಯತೆ ಸೇರಿದಂತೆ ಹಲವು ಬಂಪರ್ ಕೊಡುಗೆಗಳನ್ನು ಬಿಹಾರ ರಾಜ್ಯಕ್ಕೆ ಕೊಡಲಾಗಿದೆ.
ಕೇಂದ್ರದಲ್ಲಿ ಜೆಡಿಯು ಪಕ್ಷ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಪ್ರತಿ ಬಜೆಟ್ನಲ್ಲೂ ಸಹ ಬಿಹಾರದ ಜನತಾ ದಳ ಸಂಯುಕ್ತ (ಜೆಡಿಯು) ಪಕ್ಷ ಹಾಗೂ ಆಂಧ್ರ ಪ್ರದೇಶದ ತೆಲುಗು ದೇಶಂ ಪಕ್ಷ (ಟಿಡಿಪಿ)ದ ರಾಜ್ಯಗಳಿಗೆ ಬಂಪರ್ ಕೊಡುಗೆ ಸಿಗುತ್ತಲ್ಲೇ ಇದೆ. ಈ ಬಾರಿಯೂ ಬಜೆಟ್ನಲ್ಲೂ ಅದೇ ರಿಪೀಟ್ ಆಗಿದೆ. ಆದರೆ ಈ ಬಾರಿ ಆಂಧ್ರಪ್ರದೇಶಕ್ಕಿಂತ ಬಿಹಾರಕ್ಕೆ ಹೆಚ್ಚು ಗಿಫ್ಟ್ ಸಿಕ್ಕಿದೆ. ರಾಜ್ಯ ಕಾಂಗ್ರೆಸ್ ಸಹ ಕೇಂದ್ರ ಬಿಜೆಪಿ ಬಜೆಟ್ 2025 ಇದು ಕೇಂದ್ರ ಬಜೆಟ್ ಅಲ್ಲ ಬಿಹಾರಿ ಬಜೆಟ್… ಬಿಹಾರಕ್ಕೆ ಬೆಣ್ಣೆ ಕನ್ನಡಿಗರಿಗೆ ಸೊನ್ನೆ ಎಂದು ಟೀಕೆ ಮಾಡಿದೆ.