ಬೆಂಗಳೂರು: ಕುಮಾರಸ್ವಾಮಿ ವಿರುದ್ದ ಜೆಡಿಎಸ್ ಕಚೇರಿಗೆ ಪೋಸ್ಟರ್ ಅಂಟಿಸಿದ ವಿಚಾರವಾಗಿ ಮಾತನಾಡಿದ ಪೋಸ್ಟರ್ ಅಂಟಿಸಿದ್ದ ಕಾಂಗ್ರೆಸ್ ಮುಖಂಡ ಎಸ್ ಮನೋಹರ್, ಪೋಸ್ಟರ್ ವಾರ್ ಎಂಬ ಪದ ಜೆಡಿಎಸ್ ಬಳಸಿದೆ.
ಅನೇಕ ಬಾರಿ ಕುಮಾರಸ್ವಾಮಿ ಬ್ಲ್ಯೂ ಫಿಲಂ ಪದ ಬಳಸಿದ್ದಾರೆ. ಬ್ಲ್ಯೂ ಫಿಲಂ ನೋಡೋದು ತಪ್ಪೇ ಮಾಡೋದು ತಪ್ಪೇ. ಎಲ್ಲರನ್ನೂ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಬಂದ ರಾಜಕಾರಣಿ ಕುಮಾರಸ್ವಾಮಿ. ಅವರನ್ನು ನಾವು ಗೌರವದಿಂದಲೇ ಮಾತನಾಡಿಕೊಂಡು ಬಂದಿದ್ದೇವೆ.
ಅತೃಪ್ತರ ಮನವೊಲಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಕಸರತ್ತು: ರಮೇಶ್ ಜಾರಕಿಹೊಳಿ ಮನೆಗೆ ವಿಜಯೇಂದ್ರ ಭೇಟಿ!
ಆದರೆ ಕುಮಾರಸ್ವಾಮಿ ಅವರು ಎಲ್ಲ ರಾಜಕಾರಣಿಗಳ ಬಗ್ಗೆ ಬೇರೆ ಬೇರೆ ಪದಗಳನ್ನು ಬಳಕೆ ಮಾಡುತ್ತಾರೆ. ಅವರ ಯೋಗ್ಯತೆ ಅರ್ಹತೆ ಅನುಸಾರ ಪದ ಬಳಸುತ್ತಾರೆ. ನಾನೊಬ್ಬನೆ ಸಿಂಹ ಎಂಬ ಕುಮಾರಸ್ವಾಮಿ ಯಾಕೆ ಭ್ರಷ್ಟಾಚಾರ ಆರೋಪ ಮಾಡಿ ಅವರೇ ಸಿಎಂ ಆಗಿದ್ದಾಗ ತನಿಖೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ಪೋಸ್ಟರ್ ವಾರ್ ನಡೆಯುವಾಗ ನಾವು ಎಲ್ಲ ಮಾಹಿತಿ ಮಾಧ್ಯಮಗಳಿಗೆ ನೀಡಿಯೇ ಕಾನೂನಾತ್ಮಕವಾಗಿಯೇ ಮಾಡುತ್ತೇವೆ.
ಜೆಡಿಎಸ್ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಯಾವ ಸುದ್ದಿ ಬರುತ್ತಿದೆ ಎಂಬುದನ್ನು ಮಾಧ್ಯಮಗಳೇ ನೋಡಲಿ. ಜೆಡಿಎಸ್ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಏನೇನೋ ಪದ ಬಳಕೆ ಮಾಡುತ್ತಿದ್ದಾರೆ ಎಂದರು. ಪೋಸ್ಟರ್ ಅಂಟಿಸಿದ ವಿಚಾರವಾಗಿ ಮನೋಹರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.