ಬೆಂಗಳೂರು: ಜಾತಿಗಣತಿ (Caste Census) ವರದಿ ಜಾರಿಯಾದರೆ ಲಿಂಗಾಯತರು ಹಾಗೂ ಒಕ್ಕಲಿಗರ ಪ್ರಾಬಲ್ಯ ಕಡಿಮೆಯಾಗುವುದಿಲ್ಲ ಎಂದು ಶಾಸಕ ಬಸವರಾಜ್ ರಾಯರೆಡ್ಡಿ (Basvaraj Rayareddi) ಹೇಳಿದ್ದಾರೆ.
https://ainlivenews.com/opposition-leader-ashok-warned-of-a-fight-against-the-congress-government/
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವಿಚಾರವಾಗಿ ಸಚಿವರ ಸಹಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಜಾತಿ ಜನಗಣತಿ ಸ್ವೀಕಾರ ಮಾಡಲಿ. ನಾನೂ ಕೂಡ ಲಿಂಗಾಯತ ಸಮುದಾಯಕ್ಕೆ ಸೇರಿದವನು. ಸಚಿವರು ಪತ್ರಕ್ಕೆ ಸಹಿ ಹಾಕಿದ್ದಕ್ಕೆ ನನ್ನ ಆಕ್ಷೇಪ ಇದೆ. ಸಚಿವರು ಸರ್ಕಾರದ ಭಾಗವಾಗಿ ಹೇಗೆ ಈ ವರದಿಯನ್ನು ವಿರೋಧಿಸಿ ಸ್ವೀಕಾರ ಮಾಡುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೇವಲ ಒಬ್ಬರು ಇಬ್ಬರ ಬಗ್ಗೆ ನಾನು ಮಾತನಾಡುತ್ತಿಲ್ಲ. ಎಲ್ಲ ಸಚಿವರೂ ಹೀಗೆ ಸಹಿ ಹಾಕಿದರೆ ನನ್ನ ಆಕ್ಷೇಪವಿದೆ. ಜಾತಿಗಣತಿ ವಿಚಾರದಲ್ಲಿ ಏನು ಮಾಡಲು ಆಗುತ್ತದೆ? ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳ ಬಗ್ಗೆ ಜಾತಿಗಣತಿ ಮಾಡಲಾಗಿದೆ. ಲಿಂಗಾಯತ ಹಾಗೂ ಒಕ್ಕಲಿಗ ಬಲಿಷ್ಠ ಜಾತಿಗಳು. ಲಿಂಗಾಯತ ಸಮುದಾಯಕ್ಕೆ ಆತಂಕ ಬೇಕಾಗಿಲ್ಲ. ಯಾವುದೇ ಕಾರಣಕ್ಕೂ ರಾಜಕೀಯ ಪ್ರಾಬಲ್ಯ ಕಡಿಮೆ ಆಗುವುದಿಲ್ಲ ಎಂದಿದ್ದಾರೆ.