ನವದೆಹಲಿ: ಈ ದೇಶದಲ್ಲಿ ಬಿಜೆಪಿಯನ್ನು ತಡೆಯಬಲ್ಲ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ಬಿಜೆಪಿಯನ್ನು ತಡೆಯಲು ಬೇರೆ ಯಾವುದೇ ಪಕ್ಷದಿಂದ ಸಾಧ್ಯವಿಲ್ಲ. ಅವರನ್ನು ತಡೆಯಬಲ್ಲ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷ.
ನಮ್ಮ ಸಿದ್ಧಾಂತ ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಇಂದು ಅಧಿಕಾರದಲ್ಲಿರುವ ಜನರು ತ್ರಿವರ್ಣ ಧ್ವಜಕ್ಕೆ ನಮಸ್ಕರಿಸುವುದಿಲ್ಲ, ರಾಷ್ಟ್ರಧ್ವಜವನ್ನು ನಂಬುವುದಿಲ್ಲ ಮತ್ತು ಸಂವಿಧಾನವನ್ನು ನಂಬುವುದಿಲ್ಲ. ಅವರ ಭಾರತ ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿರುವ ಭಾರತ ಎಂದು ಬಿಜೆಪಿಯನ್ನು ದೂರಿದರು.
ಮೊಟ್ಟೆ ಜೊತೆ ಅಪ್ಪಿ ತಪ್ಪಿಯೂ ಈ ಪದಾರ್ಥಗಳನ್ನು ಸೇವಿಸಬಾರದು! ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ
ಮಾಧ್ಯಮವು ಇನ್ನು ಮುಂದೆ ಮುಕ್ತ ಮತ್ತು ನ್ಯಾಯಯುತವಾಗಿಲ್ಲ. ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ ಸುಮಾರು ಒಂದು ಕೋಟಿ ಹೊಸ ಮತದಾರರು ದಿಢೀರ್ ಕಾಣಿಸಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದವರ ಹೆಸರು ಮತ್ತು ವಿಳಾಸಗಳೊಂದಿಗೆ ಮತದಾರರ ಪಟ್ಟಿಯನ್ನು ಒದಗಿಸುವುದು ಚುನಾವಣಾ ಆಯೋಗದ ಕರ್ತವ್ಯ. ಆದರೆ ಚುನಾವಣಾ ಆಯೋಗವು ಈ ಮಾಹಿತಿಯನ್ನು ನೀಡಲು ನಿರಾಕರಿಸಿದೆ. ನಮ್ಮ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಸಮಸ್ಯೆ ಇದೆ ಮತ್ತು ಪಾರದರ್ಶಕವಾಗಿರುವುದು ಚುನಾವಣಾ ಆಯೋಗದ ಕರ್ತವ್ಯ ಎಂದು ಹೇಳಿದರು.