ಬೆಂಗಳೂರು: ಬಿಬಿಎಂಪಿ ಚುನಾವಣೆ ಹಾಗು ಸ್ಥಳೀಯ ಸಂಸ್ಥೆ ಚುನಾವಣೆ ಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸಿದೆನವೆಂಬರ್ ಡಿಸೆಂಬರ್ನಲ್ಲಿ ಚುನಾವಣೆ ಎದುರಾಗಲಿದ್ದು ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿಗಳ ಆಯ್ಕೆ ಬಗ್ಗೆ ತಯಾರಿ ನಡೆಸಿದೆ.ಇಂದು ಬೆಂಗಳೂರು ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಜೊತೆ ಡಿಸಿಎಂ ಡಿಕೆಶಿ ಸಭೆ ನಡೆಸಿದ್ದಾರೆ.ಹಲವು ಸಲಹೆ ಸೂಚನೆಗಳನ್ನ ನೀಡಿದ್ದಾರೆ.ಇದೇ ವೇಳೆ ಕೆಲಸ ಮಾಡದ ಬ್ಲಾಕ್ ಅಧ್ಯಕ್ಷರಿಗೆ ಎಚ್ಚರಿಕೆಯನ್ನೂ ರವಾನಿಸಿದ್ದಾರೆ. ಲೋಕಸಭಾ ಚುನಾವಣೆಯ ನಂತರ ಬಿಬಿಎಂಪಿ ಚುನಾವಣೆ ಹಾಗು ಸ್ಥಳೀಯ ಸಂಸ್ಥೆ ಚುನಾವಣೆಯನ್ನ ರಾಜ್ಯ ಕಾಂಗ್ರೆಸ್ ನಾಯಕರು ಗಂಭೀರವಾಗಿ ಪರಿಗಣಿಸಿದ್ದಾರೆ.ಬೆಂಗಳೂರಿನ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಸೋತ್ರೂ ಬಿಬಿಎಂಪಿ ಅಧಿಕಾರವನ್ನ ಹಿಡಿಯಲೇಬೇಕೆಂದು ಪಣತೊಟ್ಟಿದ್ದಾರೆ.
Father’s Day 2024: ಅಪ್ಪಂದಿರ ದಿನದ ಮಹತ್ವ ಪ್ರಾಮುಖ್ಯತೆ ಮತ್ತು ಇತಿಹಾಸ ತಿಳಿಯಿರಿ!
ಕಳೆದೊಂದು ವಾರದಿಂದ ಸರಣಿ ಸಭೆಗಳನ್ನ ನಡೆಸ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರಿನ ಐದು ಜಿಲ್ಲೆಗಳ ವ್ಯಾಪ್ತಿಯ ಬ್ಲಾಕ್ ಅಧ್ಯಕ್ಷರ ಸಭೆಯನ್ನ ನಡೆಸಿದ್ರು.ಬಿಬಿಎಂಪಿ ವ್ಯಾಪ್ತಿಯಲ್ಲಿಪಕ್ಷ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದ್ರು.ವಾರ್ಡ್ ವಾರು ಸಮಸ್ಯೆಗಳೇನಿದೆ ಅದನ್ನ ಗಮನಕ್ಕೆ ತನ್ನಿ,ಖುದ್ದಾಗಿ ನೇವೇ ಸಮಸ್ಯೆ ಪರಿಹರಿಸೋ ಕೆಲಸ ಮಾಡಿ.ಜನರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಿ,ಚುನಾವಣೆಯಲ್ಲಿ ಅದು ನಮಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದ್ರು.
ಎಲ್ಲಾ ಬ್ಲಾಕ್ ಅಧ್ಯಕ್ಷರಿಗೆ ಡಿಕೆಶಿ ವಾರ್ನಿಂಗ್ ಮಾಡಿದ್ದಾರೆ.ಮೊದಲಿನಂತೆ ನಾಯಕರ ಹಿಂದೆ ಮುಂದೆ ಸುತ್ತುವುದನ್ನ ಬಿಡಿ,ಕೆಪಿಸಿಸಿ ಕಚೇರಿಗೆ ಅಲೆಯುವುದನ್ನ ಬಿಡಿ.ವಾರ್ಡ್ ವಾರು ಜನರ ಬಳಿ ಹೋಗಿ,ಅವರ ಸಮಸ್ಯೆ ಆಲಿಸಿ,ಮೈನರ್ ಸಮಸ್ಯೆ ಇದ್ರೆ ನೀವೇ ಸ್ಥಳೀಯ ಅಧಿಕಾರಿಗಳ ಮೂಲಕ ಬಗೆಹರಿಸಿ.ದೊಡ್ಡದಿದ್ದರೆ ನನ್ನ ಗಮನಕ್ಕೆ ತನ್ನಿ ನಾನೇ ಮುಂದೆ ನಿಂತು ಬಗೆಹರಿಸ್ತೇನೆ.ಮುಂಚೂಣಿ ಘಟಕಗಳ ಮುಖಂಡರ ಜೊತೆ ಹೊಂದಾಣಿಕೆ ಮಾಡಿಕೊಳ್ಳಿ,ವಾರ್ಡ್ ವಾರು ಯಾರು ಉತ್ತಮ ಆಕಾಂಕ್ಷಿಗಳಿದ್ದಾರೆ ಅವರ ಪಟ್ಟಿಯನ್ನ ಕೊಡಿ,ಮುಂದೆ ಯಾರಿಗೆ ಟಿಕೆಟ್ ಕೊಡ್ಬೆಕುಅನ್ನೋದನ್ನ ನಾವು ಡಿಸೈಡ್ ಮಾಡ್ತೇವೆ.
ಒಂದು ವೇಳೆ ವಾರ್ಡ್ ವಾರು ನೀವು ಪಕ್ಷ ಸಂಘಟನೆ ಮಾಡದೇ ಹೋದ್ರೆ ನಿಮ್ಮ ಸ್ಥಾನಗಳುಭದ್ರವಾಗಿರಲ್ಲ,ಹೊಸಬರಿಗೆ ಅವಕಾಶ ಮಾಡಿಕೊಡಬೇಕಾಗುತ್ತೆ ಅಂತ ಎಚ್ಚರಿಕೆ ರವಾನಿಸಿದ್ದಾರೆ.ಇನ್ನು ಆದಷ್ಟು ಬೇಗ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಚುನಾವಣೆ ಮಾಡ್ತೀವಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಒಟ್ನಲ್ಲಿ ಬಿಬಿಎಂಪಿಚುನಾವಣೆ ಹಾಗು ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ರಾಜ್ಯ ಕಾಂಗ್ರೆಸ್ ನಾಯಕರು ಸನ್ನದ್ಧರಾಗ್ತಿದ್ದಾರೆ.ತಳಮಟ್ಟದಲ್ಲಿ ಪಕ್ಷ ಸಂಘಟನೆ ಮಾಡೋಕೆ ತಯಾರಿ ಆರಂಭಿಸಿದ್ದಾರೆ.ಈಗಾಗಲೇ ಈ ಬಗ್ಗೆ ಸರಣಿ ಸಭೆಗಳು ಶುರುವಾಗಿದ್ದು,ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷವನ್ನ ಸೋಲಿಸಲು ಕಾಂಗ್ರೆಸ್ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ.