ದಾವಣಗೆರೆ:– ಹಿಂದು, ಮುಸ್ಲಿಮರು ಒಂದಾಗಲು ಕಾಂಗ್ರೆಸ್ ಬಿಡುತ್ತಿಲ್ಲ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಹಿಂದು, ಮುಸ್ಲಿಮರು ಒಟ್ಟಾಗಿರಬೇಕೆಂಬ ಭಾವನೆ ಮುಸ್ಲಿಮರಲ್ಲೂ ಇದೆ. ಆದರೆ, ಇವರಿಬ್ಬರು ಒಟ್ಟಾದರೆ ತಾನು ರಾಜಕೀಯ ಮಾಡಲು ಆಗಲ್ಲ ಎಂದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯನವರು ಒಂದಾಗಲು ಬಿಡುತ್ತಿಲ್ಲ ಎಂದರು.
ತ್ರಿವಳಿ ತಲಾಕ್ ನಿಷೇಧವನ್ನು ಮುಸ್ಲಿಮರು ಒಪ್ಪಿದ್ದರೂ ಕಾಂಗ್ರೆಸ್ ಒಪ್ಪುತ್ತಿಲ್ಲ. ಇಂದಿಲ್ಲ, ನಾಳೆ ದೇಶಕ್ಕೆ ಸಮಾನ ನಾಗರಿಕ ಸಂಹಿತೆ ಬರಲಿದೆ. ಇದು ಕಾಂಗ್ರೆಸ್ಗೆ ತೆಡೆದುಕೊಳ್ಳಲಾಗುತ್ತಿಲ್ಲ.
ಹೀಗಾಗಿ ಮುಸ್ಲಿಂ ಹಾಗೂ ಹಿಂದುಗಳು ದೂರ ಇರಬೇಕು ಎನ್ನುವುದು ಕಾಂಗ್ರೆಸ್ ಇರಾದೆ. ಮುಂದೊಂದು ದಿನ ಇಡೀ ದೇಶ ಒಂದಾಗಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಸ್ವಾತಂತ್ರ್ಯ ಹೋರಾಟ ಮಾಡಿದ ಕಾಂಗ್ರೆಸ್ಸಿಗರು ಈಗ ಸ್ವರ್ಗದಲ್ಲಿದ್ದಾರೆ. ಅವರ ಕನಸು ನಮ್ಮ ಸಂಸ್ಕೃತಿ, ಧರ್ಮ ಉಳಿಯಬೇಕು ಎಂಬುದಾಗಿತ್ತೇ ಹೊರತು ಹಿಂದು, ಮುಸ್ಲಿಮರು ಹೊಡೆದಾಡುತ್ತ ಕುಳಿತಕೊಳ್ಳಲು ಅಲ್ಲ. ಮುಸ್ಲಿಮರು ಸಿದ್ಧರಿದ್ದರೂ ಕಾಂಗ್ರೆಸ್ ಸಿದ್ಧವಿಲ್ಲ. 2024ರ ಲೋಕಸಭಾ ಚುನಾವಣೆಯ ಬಳಿಕ ಮತ್ತೆ ಪ್ರಧಾನಿಯಾಗಿ ನರೇಂದ್ರ ಮೋದಿ ಆಯ್ಕೆಯಾಗಿ ಸುಭದ್ರ ದೇಶ ಕಟ್ಟುತ್ತಾರೆ ಎಂದರು.