ಹಾವೇರಿ :– ಸರ್ಕಾರವನ್ನು ತಾಲಿಬಾನ್ ರೀತಿ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಡಿಜೆ ಹಳ್ಳಿ, ಕೆಜೆ ಹಳ್ಳಿಯವರನ್ನು ಅಮಾಯಕರು ಅಂತ ಹೇಳುತ್ತಾರೆ. ಸಾಕ್ಷಿಗಳನ್ನು ವೀಕ್ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ.
ದೇಶದ ಈ ನೆಲದಲ್ಲಿ ಎಂಥ ರಿಸ್ಕ್ ಬೇಕಾದರೂ ತೆಗೆದುಕೊಂಡು ಅವರನ್ನು ಉಳಿಸಬೇಕು ಎಂಬುದು ಕಾಂಗ್ರೆಸ್ ನಿರ್ಧಾರ. ಶ್ರೀಕಾಂತ್ ಪೂಜಾರಿ ವಿಚಾರವನ್ನೇ ತೆಗೆದುಹಾಕಿದ್ದಾರೆ. 16 ಕೇಸು ಇದೆ ಅಂತ ಯಾರು ವರದಿ ಕೊಟ್ಟರು? ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತೀರಿ’ ಎಂದು ಸಚಿವರು ಪ್ರಶ್ನಿಸಿದ್ದಾರೆ.
‘ತಾಲಿಬಾನ್ ರೀತಿ ಸರ್ಕಾರ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಹುಚ್ಚುಚ್ಚು ಮಾಡೋಕೆ ಹೋದರೆ ಜನ ನಿಮಗೆ ತಕ್ಕ ಉತ್ತರ ಕೊಡ್ತಾರೆ’ ಎಂದರು. ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಶ್ರೀಕಾಂತ್ ಪೂಜಾರಿ ಮೇಲಿನ ಕೇಸ್ ಯಾಕೆ ವಾಪಾಸ್ ಪಡೆಯಲಿಲ್ಲ ಎಂಬ ಜಗದೀಶ್ ಶೆಟ್ಟರ್ ಹೇಳಿಕೆಗೆ ಟಾಂಗ್ ಕೊಟ್ಟ ಜೋಶಿ, ‘ಈಗ ಅವರ ಸರ್ಕಾರದಲ್ಲಿ ಅವರ ಮಾತು ನಡೆಯಲ್ವಾ? ಹುಬ್ಬಳ್ಳಿ- ಧಾರವಾಡದಲ್ಲಿ ಯಾವ ಬಿಜೆಪಿ ಕೇಸು ಹಿಂತೆಗೆದುಕೊಳ್ಳುವ ಪರಿಸ್ಥಿತಿ ಬಂದಿತ್ತು. ಆಗೆಲ್ಲ ಇವರೇ ಶಾಸಕ, ಮಂತ್ರಿಯಾಗಿದ್ದರು. ಆದ್ರೂ ಏಕೆ ಕೇಸ್ ತೆಗೆಯಲಿಲ್ಲ?’ ಎಂದು ಕೇಳಿದ್ದಾರೆ.