ಬೆಂಗಳೂರು:- ಬೆಂಗಳೂರು ಕಂಬಳಕ್ಕೆ ಕೊಟ್ಟಿರೋ 1 ಕೋಟಿ ವಾಪಸ್ಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.
ಕಂಬಳ ನಡೆಯೋದೇ ಅನುಮಾನವಾಗಿದ್ದು, ಹೀಗಾಗಿ ಹಣ ವಾಪಸ್ ಕೊಡುವಂತೆ ಸೂಚಿಸಿದೆ. MLA ಅಶೋಕ್ ರೈ ಸಸ್ಪೆಂಡ್ ಮಾಡಿ, ಸಿಎಂ, ಡಿಸಿಎಂ ಯಾರೂ ಕಂಬಳದ ವೇದಿಕೆ ಹತ್ತಬಾರದು ಎಂದು ಸುರ್ಜೇವಾಲ ಖಡಕ್ ಸೂಚನೆ ನೀಡಿದ್ದಾರೆ.
ಪಕ್ಷದ ವಿರುದ್ಧ ಬೀದಿ-ಬೀದಿಯಲ್ಲಿ ಜನ ಆಕ್ರೋಶ ಹೊರ ಹಾಕ್ತಿದ್ದಾರೆ, ಲೈಂಗಿಕ ಕಿರುಕುಳ ಆರೋಪ ಹೊತ್ತವರನ್ನು ಆಹ್ವಾನಿಸೋದು ಅಂದ್ರೆ ಏನು. ಕಾಂಗ್ರೆಸ್ ಶಾಸಕರೇ ಇಂಥವರನ್ನು ಆಹ್ವಾನಿಸಿದ್ದು ಎಷ್ಟು ಸರಿ, ಬ್ರಿಜ್ ಭೂಷಣ್ ಆಹ್ವಾನಿಸಿದ್ದಕ್ಕೆ ಜನ ಹಾದಿ-ಬೀದಿಯಲ್ಲಿ ನಗ್ತಿದ್ದಾರೆ, ಕಾಂಗ್ರೆಸ್ ಮಾನ-ಮರ್ಯಾದೆ ಹರಾಜು ಆಗ್ತಿದೆ. ಕಾಂಗ್ರೆಸ್ ಶಾಸಕರೇ ಇಂಥಾ ಕೆಲಸಕ್ಕೆ ಕೈ ಹಾಕಬಹುದಾ..? ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಫುಲ್ ಗರಂ ಆಗಿದ್ದಾರೆ.