ಚಿತ್ರದುರ್ಗ: 2028 ರ ವರೆಗೆ ನಾವು ಇಲ್ಲಿರ್ತೀವಿ. ಕರ್ನಾಟಕದಲ್ಲಿ 2028ರ ವರೆಗೆ ಕಾಂಗ್ರೆಸ್ ಸರಕಾರ ಇರುತ್ತೆ ಅಷ್ಟು ಮಾತ್ರ ಗೊತ್ತು ಅಂತಾ ಯೋಜನೆ ಹಾಗೂ ಸಾಂಖ್ಯಿಕ ಸಚಿವ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿಕೆ ಸಧ್ಯ ಜಿಲ್ಲಾ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಚಿತ್ರದುರ್ಗದಲ್ಲಿ ಮಾತನಾಡಿರುವ ಡಿ. ಸುಧಾಕರ್ , ಕಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಮತ್ತೆ ಬಿಜೆಪಿಗೆ ಸೇರ್ಪಡೆಯಾದ ಹಿನ್ನೆಲೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುವ ವೇಳೆ 2028 ರ ವರೆಗೆ ರಾಜ್ಯದಲ್ಲಿ ನಾವು ಇರ್ತೀವಿ.
Govt Scheme: ಬ್ಯುಸಿನೆಸ್ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಲೋನ್.! ಸುಲಭವಾಗಿ ಪಡೆಯಿರಿ 10 ಲಕ್ಷ ರೂ.
ರಾಜ್ಯದಲ್ಲಿ 2028 ರ ವರೆಗೆ ಕಾಂಗ್ರೆಸ್ ಸರಕಾರ ಇರುತ್ತೆ ಅಂತಾ ಹೇಳ್ತೀನಿ ಅಷ್ಟು ಮಾತ್ರ ಗೊತ್ತು ಎನ್ನುವ ಮೂಲಕ 2028ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭವಿಷ್ಯ ನುಡದ್ರಾ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಒಂದೆಡೆ ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದು, ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಯಂಥ ನಾಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನುವ ಸುದ್ದು ರಾಜ್ಯ ರಾಜಕಾರಣದಲ್ಲಿ ಓಡಾಡುತ್ತಿದೆ. ಇಂಥ ಸಂದರ್ಭದಲ್ಲಿ ಸಚಿವ ಡಿ. ಸುಧಾಕರ್ ಈ ಹೇಳಿಕೆ ಸಧ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.