ಗದಗ:- ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಬಿಟ್ಟ ವಿಚಾರವಾಗಿ ಮಾಜಿ ಸಿಎಂ ಹಾಗೂ ಹಾವೇರಿ-ಗದಗ ಲೋಕಸಭಾ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಲ್ಹಾದ್ ಜೋಶಿ ಲಿಂಗಾಯತ ಸಮಾಜ ತುಳಿಯುತ್ತಿದ್ದಾರೆ -ದಿಂಗಾಲೇಶ್ವರ ಸ್ವಾಮಿ
ಗದಗದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇಡೀ ವರ್ಷ ತಮಿಳನಾಡಿನ ಹಿತಾಸಕ್ತಿ ಕಾಪಾಡಲು ಸರ್ವ ಪ್ರಯತ್ನ ಮಾಡಿದೆ. ಅವರ ರಾಜಕೀಯ ಪಾರ್ಟ್ನರ್ ಡಿಎಂಕೆ ರನ್ನ ಸಂತೈಸೋದೇ ಕೆಲಸ ಆಗಿದೆ. ಕರ್ನಾಟಕ ಜನರ ಹಿತಾಸಕ್ತಿಗಿಂತ ಡಿಎಂಕೆ ಸಂತೈಸುವದೇ ಪ್ರಮುಖವಾಗಿ ಕಂಡು ಬಂದಿದೆ…
ಹಲವಾರು ಬಾರಿ ನಾವು ಈ ಬಗ್ಗೆ ಪ್ರತಿಭಟನೆ ಮಾಡಿದ್ದೇವೆ. ಸರ್ವಪಕ್ಷ ಸಭೆ ಸೇರಿದಂತೆ, ವಿಧಾನಸಭೆಯಲ್ಲೂ ಹೇಳಿದ್ದೇವೆ. ಕರ್ನಾಟಕದ ಜನ ಇಂದು ನೀರಿಗೆ ಪರಿತಪಿಸುತ್ತಿದ್ದಾರೆ. ಬರಗಾಲ ಇದೆ..ಬೇಸಿಗೆ ಇದೆ..ಜಲಾನಯನ ಪ್ರದೇಶದ ಜನ್ರಿಗೆ ನೀರಿಲ್ಲ. ಬೆಂಗಳೂರಿನ ಜನತೆಗೆ ನೀರಿಲ್ಲ..
ಇಂಥಹ ಸಂದರ್ಭದಲ್ಲಿ ಕಾಂಗ್ರೆಸ್ ನವರಿಗೆ ರಾಜಕೀಯ ಮಹತ್ವದ್ದಾಗಿದೆ. ಇದು ಅತ್ಯಂತ ಖಂಡನೀಯ ಎಂದು ಗದಗನಲ್ಲಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.