ಹುಬ್ಬಳ್ಳಿ; ಕಾಂಗ್ರೆಸ್ ಸರ್ಕಾರ ಅವೈಜ್ಞಾನಿಕ ನೀತಿಯಿಂದ ಆರ್ಥಿಕ ದಿವಾಳಿತನದತ್ತ ಹೋಗತಾ ಇದೆ ಎಂದು ರಾಜ್ಯ ವಿಧಾನ ಸಭಾ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಕಾಂಗ್ರೆಸ್ ಸರ್ಕಾರ ತನ್ನ ಅವೈಜ್ಞಾನಿಕ ಯೋಜನೆಗಳಿಗೆ ಹಣ ಒದಗಿಸಲು ಕೇವಲ 12 ವಾರಗಳಲ್ಲಿ ₹2.48 ಲಕ್ಷ ಕೋಟಿ ಸಾಲವನ್ನು ಪಡೆಯುವ ಮೂಲಕ ತನ್ನ ಅಸಮರ್ಥತೆಯ ಪ್ರದರ್ಶನ ಮಾಡಿದೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.
PM Awas Yojana: ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆ ಪಡೆಯುವುದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
ಹಣ ಎಲ್ಲಿ ಹೋಗುತ್ತಿದೆ? ಕೈಗಾರಿಕೆಗಳಿಗಂತೂ ಅಲ್ಲ ಏಕೆಂದರೆ ಅವೆಲ್ಲಾ ಬೇರೆ ರಾಜ್ಯಗಳಿಗೆ ಪಲಾಯನವಾಗುತ್ತಿವೆ. ಅಭಿವೃದ್ಧಿಗಳಿಗೆ ಎನ್ನಲು ರಾಜ್ಯದಲ್ಲಿ ಅಂತಹ ಅಭಿವೃದ್ಧಿಗಳೇನೂ ಕಾಣಿಸುತ್ತಿಲ್ಲ. ಬದಲಾಗಿ ಕಾಂಗ್ರೆಸ್ಸಿನ ದುರಾಡಳಿತದಿಂದ ರಾಜ್ಯದ ಪ್ರತಿಯೊಬ್ಬ ಪ್ರಜೆ ದಿನೇ ದಿನೇ ಬೇಸತ್ತು ಹೋಗಿರುವುದು ಸ್ಪಷ್ಟವಾಗಿದೆ.
ಸರ್ಕಾರ ಬಾಕಿ ಉಳಿಸಿಕೊಂಡಿರುವ ಮೊತ್ತ ರಾಜ್ಯದ ಒಟ್ಟು ಉತ್ಪಾದನೆಯ 24℅ ಕಿಂತ ಜಾಸ್ತಿಯಾಗಿದೆ. ಹೊಸ ಸಾಲದ ಅರ್ಧದಷ್ಟು ಹಣ ಹಳೆಯ ಸಾಲಗಳ ತೆರವಿಗೇ ವಿನಿಯೋಗವಾಗುತ್ತಿರುವುದು ನಾಚಿಕೆಗೇಡು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದು ಕರ್ನಾಟಕದ ಆರ್ಥಿಕತೆಗೆ ಟೈಮ್ ಬಾಂಬ್ ಇದ್ದಂತೆ ಎಂದು ಎಚ್ಚರಿಸಿದ್ದಾರೆ.