ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ವಕ್ಫ್ ಕಾಯ್ದೆ ದುರ್ಬಳಿಕೆ ಮಾಡಿ ರೈತರ ಜಮೀನು ಮತ್ತು ಮಠ ಮಾನ್ಯಗಳು ಹಿಂದೂ ದೇವಾಲಯಗಳನ್ನು ಸೇರಿದಂತೆ ಎಲ್ಲ ಜಾಗವನ್ನು ವಕ್ಫ್ ಬೋಡಿಗೆ ಸೇರಿಸುವ ಹುನ್ನಾರ ನಡೆಸುತ್ತಿದೆ. ವಕ್ಫ್ ಕಾಯ್ದೆ ಮುಸ್ಲಿಂ ಜನಾಂಗವನ್ನು ತುಷ್ಟೀಕರಣಕ್ಕಾಗಿ ಮತ್ತು ಮತಗಳಿಕೆಯ ಆಸೆಯೊಂದಿಗೆ ಇಂಥ ಕಾಯ್ದೆಯನ್ನು ತಂದು ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಹಾಗೂ ವಕ್ಫ್ ಸಚಿವ ಜಮೀರ್ ಅಹ್ಮದಖಾನ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರವಾಸ ಮಾಡಿ ವಕ್ಫ್ ಪ್ರಗತಿ ಪರಿಶೀಲನ ಹಾಗೂ ಅದಾಲತ್ ನಡೆಸಿ ಕರ್ನಾಟಕ ಸರ್ಕಾರದ 1974ರ ಗೆಜೆಟ್ ಆಗಿರುವ ಪ್ರಕಾರ ರೈತರ ಕೃಷಿ ಜಮೀನವನ್ನು ಮಠ ಮಂದಿರದ ಆಸ್ತಿಗಳನ್ನು ಸೇರಿದಂತೆ ಬಹುದೊಡ್ಡ ಪ್ರಮಾಣದ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ತಕ್ಷಣ ಕಂದಾಯ ದಾಖಲೆಗಳಲ್ಲಿ ಇಂದಿರಿಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳ ಸೂಚನೆ ನೀಡಿದ್ದು ಖಂಡನೀಯ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಒಂದು ಜನಾಂಗದ ಓಲೆಗೆಗಾಗಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ. ಭಾರತ ದೇಶವನ್ನು ಮುಸ್ಲಿಂ ರಾಷ್ಟ್ರವನ್ನು ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಜಮೀರ್ ಅಹ್ಮದ್ ಖಾನಅವರು ಎಲ್ಲ ಜಿಲ್ಲೆಗಳಿಗೂ ಹೋಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ವಕ್ಫ್ ಆಸ್ತಿಯನ್ನು ಬೇಲಿ ಹಾಕಿ ಎಂದು ಹುನ್ನಾರ ನಡೆಸುತ್ತಿದ್ದಾರೆ.
ರೈತರ ಜಮೀನು ಮಠ ಮಂದಿರಗಳನ್ನು ಕಂದಾಯ ದಾಖಲೆಗಳಲ್ಲಿ ವಕ್ಫ್ ಆಸ್ತಿಯಾಗಿ ದಾಲೆಯನ್ನು ಸೃಷ್ಟಿಸುವ ಉನ್ನಾರ ಮಾಡುತ್ತಿದ್ದಾರೆ. ಇವರ ಪರಿಣಾಮವಾಗಿ ಪ್ರತಿಯೊಬ್ಬ ರೈತರು ಆತಂಕಗೊಂಡಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ವಕ್ಫ್ ಕಾಯ್ದೆಯನ್ನು ರದ್ದು ಪಡಿಸಿ ನಮ್ಮ ರೈತರ ಜಮೀನನ್ನ ಮತ್ತೆ ಉಳುಮೆ ಮಾಡಲು ಅವಕಾಶ ಕೊಡಬೇಕೆಂದು ಆಗ್ರಹಿಸಿದರು.
ವಕ್ಫ್ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಇದೇ ದಿ. 05.11.2024 ರಂದು ಮಂಗಳವಾರ ಬನಹಟ್ಟಿಯ ಈಶ್ವರ್ಲಿಂಗ ಮೈದಾನದಿಂದ ರಬಕವಿ ಬನಹಟ್ಟಿ ತಹಶೀಲ್ದಾರ್ ಕಚೇರಿ ವರೆಗೂ ಪ್ರತಿಭಟಿಸಲಾಗುತ್ತದೆ ಎಂದು ಹೇಳಿದರು ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದರೆಪ್ಪ ಉಳ್ಳಾಗಡ್ಡಿ. ಸುರೇಶ ಅಕ್ಕಿವಾಟ. ನಂದು ಗಾಯಕವಾಡ. ಶ್ರೀಶೈಲ ಬಿಳಗಿ. ಶ್ರೀಶೈಲ ಯಾದವಾಡ. ಪುಂಡಲಿಕ ಪಾಲಬಾವಿ. ಶಿವು ದೇಸಾಯಿ. ಶಂಕರ ಹುನ್ನೊರ. ಮಾರುತಿ ಗಾಡಿವಡ್ಡರ.ಪಾಂಡು ಹಿಪ್ಪರಗಿ.ರವಿ ಕೋ ಆನಂದ ಕಂಪು. ರೈತರ ಮುಖಂಡರಾದ ಮಹಾದೇವ ತಳ್ಳಿ. ಬಾಪಾಲ ಅಪ್ಪಾಸಾಬ ತಳ್ಳಿ. ಬಾಹುಬಲಿ ಶೇಡಬಾಳ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.
ಪ್ರಕಾಶ ಕುಂಬಾರ
ಬಾಗಲಕೋಟೆ