ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೆ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದು ಸಿದ್ದರಾಮಯ್ಯ ಅವರ ತೀರ್ಮಾನವನ್ನು ಖಂಡಿಸುತ್ತೇನೆ ಶಾಲಾ ಮಕ್ಕಳಿಗೆ ಸಮವಸ್ತ್ರ ನೀತಿ ಅಗತ್ಯ ಇದನ್ನು ಧಿಕ್ಕರಿಸಿ ಸಿದ್ದರಾಮಯ್ಯ ಈ ತೀರ್ಮಾನ ಕೈಗೊಂಡಿದೆ ಈಗಲೇ ಎಚ್ಚೆತ್ತು ಈ ತೀರ್ಮಾನ ವಾಪಸ್ ಪಡೆಯಲಿ ಇದೊಂದು ಭಂಡ ಸರ್ಕಾರ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ನಿಷೇಧ ವಾಪಸ್ ಕುರಿತು ಸಿಎಂ ಹೇಳಿಕೆ ವಿಚಾರ ಬಗ್ಗೆಯೂ ಮಾತನಾಡಿ, ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎನ್ನುವ ಪಕ್ಷ ಬಿಜೆಪಿ ಇಂದು ಸಿಎಂ ಹಿಜಾಬ್ ರದ್ದು ಮಾಡುವ ತೀರ್ಮಾನ ತೆಗೆದುಕೊಳ್ಳಲು ಹೊರಟಿರುವುದನ್ನು ಖಂಡಿಸುತ್ತೇನೆ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಈ ತೀರ್ಮಾನ ತೆಗೆದುಕೊಂಡಿದ್ದಾರೆ ಹಿಜಾಬ್ ರದ್ದು ಮಾಡಿ ಅಂತಾ ಯಾವ ಮುಸ್ಲಿಂ ಮುಖಂಡರು ಸಿದ್ದರಾಮಯ್ಯನವರನ್ನು ಕೇಳಿದ್ದರು?
ಇವೆಲ್ಲಾ ರಾಜಕೀಯ ದೊಂಬರಾಟವನ್ನು ಸಿಎಂ ಬಿಡಬೇಕು ಈ ರೀತಿ ಮಾಡುವುದರಿಂದ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಸಾಧ್ಯವಿಲ್ಲ ಲೋಕಸಭಾ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಎನ್ನುವುದನ್ನೂ ಮರೆತು ಈ ರೀತಿ ಮಾತಾಡುತ್ತಿದ್ದೀರಿ ಈಗಲಾದರೂ ತೀರ್ಮಾನ ವಾಪಸ್ ಪಡೆಯಬೇಕು ಸಿಎಂ ಜಾಗೃತರಾಗಿ ಮೊದಲಿದ್ದ ರೀತಿಯಲ್ಲಿ ಮುಂದುವರೆಯಲು ಅವಕಾಶ ಕೊಡಬೇಕು ಬಿಜೆಪಿ ಇದಕ್ಕೆ ಹೋರಾಟ ಮಾಡುವ ಅಗತ್ಯ ಇಲ್ಲ ಇದು ಭಂಡ ಸರ್ಕಾರ ಅವರ ಉಚಿತ ಕಾರ್ಯಕ್ರಮಗಳನ್ನು ಜಾರಿ ಮಾಡಲಾಗದೇ ಜನರನ್ನ ದಿಕ್ಕು ತಪ್ಪಿಸಲು ಈ ರೀತಿ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ ಇದನ್ನು ಯಾರೂ ಕೂಡಾ ಒಪ್ಪುವುದಿಲ್ಲ ರಾಜ್ಯದ ಜನರ ಒತ್ತಾಯ ಮನಗಂಡು ಸಿದ್ದರಾಮಯ್ಯ ತೀರ್ಮಾನ ವಾಪಸ್ ಪಡೆಯಬೇಕು ಎಂದರು,
.ಹಾಗೆ ಐಷಾರಾಮಿ ವಿಮಾನದಲ್ಲಿ ಸಿಎಂ ಮತ್ತು ಸಚಿವರು ಪ್ರಯಾಣ ವಿಚಾರ ಬಗ್ಗೆಯೂ ಮಾತನಾಡಿ ನಾನು ಅದರ ಬಗ್ಗೆ ಯಾವುದೇ ಟೀಕೆ ಮಾಡಲು ಹೋಗಲ್ಲ ಬರಗಾಲವನ್ನು ಇವರು ಮರೆತೇ ಬಿಟ್ಟಿದ್ದಾರೆ ಯಾವುದೇ ಮಂತ್ರಿ ಬರ ಪ್ರವಾಸ ಮಾಡಿಲ್ಲ, ಪರಿಹಾರ ಕೊಟ್ಟಿಲ್ಲ ಸಿಎಂ ನಡವಳಿಕೆಗೆ ಜನ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.