ಚಿತ್ರದುರ್ಗ:- ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಮಾಜ ಹಾಳು ಮಾಡ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಗದಗನಲ್ಲಿ ಜನತಾ ಸಂವಾದ ಸದನದಲ್ಲಿ ಪಾಲ್ಗೊಳ್ಳಲಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ!
ಈ ಸಂಬಂಧ ಮಾತನಾಡಿದ ಅವರು, ಮನೆಯಲ್ಲಿ ಮಲಗಿದ್ದ ನಾಲ್ಕು ಜನರನ್ನು ರಾಜಾರೋಷವಾಗಿ ಕೊಲೆ ಮಾಡಲಾಗಿದೆ. ಸರ್ಕಾರ ಇದೆಯಾ ಆಡಳಿತ ನಡಿತಾ ಇದಿಯಾ
ಭಯ ಭಕ್ತಿ ಇಲ್ಲ. ಇಂತಹ ಘಟನೆಗಳು ಈ ಸರ್ಕಾರ ಬಂದ ಮೇಲೆ ನಡೆಯುತ್ತಿವೆ. ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಲಘುವಾಗಿ ಉತ್ತರ ಕೊಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಮುಂದೆ ಸರ್ಕಾರ ಎಲ್ಲಿಗೆ ತೆಗೆದುಕೊಂಡುಹೋಗುತ್ತದೆಯೋ ಎಂದು ಜನ ನೋಡಬೇಕು. ನೂರಕ್ಕೆ ನೂರು ಒಂದು ಸಮಾಜದ ಮತ ಪಡೆಯಲು ಒಲೈಕೆ ಮಾಡುತ್ತಿದ್ದಾರೆ. ಇದರಲ್ಲಿ ಸಂಶಯವಿಲ್ಲ ಸಮಾಜ ಹಾಳು ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.