ಉಡುಪಿ: ಬಿ.ಕೆ ಹರಿಪ್ರಸಾದ್ (BK Hariprasad) ಹಿಂದೂವೇ ಅಲ್ಲ. ಅವರು ದೇಶದ್ರೋಹಿ. ಕಾಂಗ್ರೆಸ್ ನಲ್ಲಿ ನಿರ್ಲಕ್ಷಕ್ಕೆ ಒಳಪಟ್ಟ ನಾಯಕ ಇದ್ದರೆ ಅದು ಬಿ.ಕೆ ಹರಿಪ್ರಸಾದ್ ಎಂದು ಶಾಸಕ ಯಶ್ ಪಾಲ್ ಸುವರ್ಣ (Yashpal Suvarna) ವಾಗ್ದಾಳಿ ನಡೆಸಿದ್ದಾರೆ. ಅಯೋಧ್ಯೆ ಬಿಜೆಪಿ (BJP) ಪಕ್ಷದ ರಾಜಕೀಯ ಮಂದಿರ. ರಾಮಲಲ್ಲಾ ಪ್ರತಿಷ್ಠಾಪನೆ ಮಾಡುವ ಮೋದಿ,
ಅಮಿತ್ ಶಾ ಅವರದ್ದು ಯಾವ ಧರ್ಮ ಎಂದು ಹರಿಪ್ರಸಾದ್ ಪ್ರಶ್ನೆ ಮಾಡಿದ್ದಾರೆ. ಈ ವಿಚಾರಕ್ಕೆ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ ನವರೇ ಹರಿಪ್ರಸಾದ್ ಅನ್ನು ಲೆಕ್ಕಿಸುವುದಿಲ್ಲ, ಬದಿಗಿಟ್ಟಿದ್ದಾರೆ. ರಾಮ ಮಂದಿರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ.
ಇಂಡಿಯನ್ ಆಯಿಲ್ ಕಂಪನಿಯಲ್ಲಿ 1603 ಹುದ್ದೆಗಳು ಖಾಲಿ..! ಇಂದೇ ಕೊನೆ ದಿನ – ಬೇಗ ಅಪ್ಲೈ ಮಾಡಿ
ಅಯೋಧ್ಯೆಗೆ ರಾಮಭಕ್ತರು ದೇಶಭಕ್ತರು ಬರಬೇಕು ಎಂದು ಕರೆ ಕೊಟ್ಟಿದ್ದೇವೆ. ದೇಶ ವಿರೋಧಿಗಳು ಬರುವುದು ಬೇಡ. ಬಿಕೆ ಹರಿಪ್ರಸಾದ್ ಒಬ್ಬ ದೇಶದ್ರೋಹಿ. ದೇಶದ್ರೋಹಿಯ ಯಾವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಗರಂ ಆದರು.