ವಿಜಯಪುರ:- ಕಾಂಗ್ರೆಸ್ಗೆ ರಾಮ ಮಂದಿರ ನಿರ್ಮಾಣ ಆಗೋದು ಇಷ್ಟವಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ
ಈ ಸಂಬಂಧ ಮಾತನಾಡಿದ ಅವರು,ಶ್ರೀರಾಮ ಮಂದಿರ ಹೋರಾಟದ ಹಳೆಯ ಕೇಸ್ ರೀಓಪನ್ ಮಾಡಿ ಹೋರಾಟಗಾರರನ್ನು ಬಂಧಿಸುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ರೀವೆಂಜ್ ತೀರಿಸಿಕೊಳ್ಳಲು ಹೊರಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಟುವಾಗಿ ಟೀಕಿಸಿದರು. ಜ್ಞಾನಯೋಗಾಶ್ರದಲ್ಲಿ ನಡೆದ ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದಾಗ ವಿಜಯಪುರ ಸೈನಿಕ ಶಾಲೆಯ ಹೆಲಿಪ್ಯಾಡ್ನಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಗೊಂದಲದಲ್ಲಿ ಮುಳುಗಿದೆ.
ಕಾಂಗ್ರೆಸ್ಗೆ ರಾಮ ಮಂದಿರ ನಿರ್ಮಾಣ ಆಗೋದು ಬೇಕಾಗಿರಲಿಲ್ಲ.
ರಾಮ ಮಂದಿರದ ಕಲ್ಪನೆಯೂ ಇರಲಿಲ್ಲ. ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿರೋಧ ಮಾಡಿದ್ದರು ಎಂದರು. ರಾಮ ಕೇವಲ ಕಲ್ಪನೆ ಎಂದು ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಆದರೆ, ಈಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ತಲೆ ಎತ್ತಿದೆ. ಕಾಂಗ್ರೆಸ್ಗೆ ಹೊಟ್ಟೆ ಕಿಚ್ಚು, ಆತಂಕ ಶುರುವಾಗಿದೆ. ರಾಮ ಮಂದಿರ ಉದ್ಘಾಟನೆಗೆ ಹೋಗಬೇಕೋ ಬೇಡವೋ ಎಂಬ ಕನ್ಫ್ಯೂಜ್ನಲ್ಲಿದ್ದಾರೆ ಎಂದು ಹೇಳಿದರು.