ಧಾರವಾಡ: “ಬಿಕೆ ಹರಿಪ್ರಸಾದ್ಗೆ ಮಂತ್ರಿಗಿರಿ ಸಿಕ್ಕಿಲ್ಲ ಅಂತಾ ಏನೇನೋ ಮಾತಾಡುತ್ತಿದ್ದಾರೆ. ಇದೇ ರೀತಿ ಮಾತಾಡಿದರೆ ಶಾಶ್ವತವಾಗಿ ಮಂತ್ರಿಗಿರಿ ಸಿಗೋಲ್ಲ. ನೀವು ರಾಮನ ಸೇವೆ ಮಾಡಿದರೆ ಮಂತ್ರಿಗಿರಿ ನಿಜವಾಗಿಯು ಸಿಗುತ್ತೆ. ರಾಮನ ವಿರೋಧಿ ಭಾವನೆ ವ್ಯಕ್ತಪಡಿಸಬೇಡಿ ” ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ವಿಧಾನಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರಿಗೆ ಸಲಹೆ ನೀಡಿದ್ದಾರೆ.
ಬಿ.ಕೆ. ಹರಿಪ್ರಸಾದ ಹೇಳಿಕೆ ವಿಚಾರ ಕುರಿತು ಹುಬ್ಬಳ್ಳಿಯಲ್ಲಿ ಪ್ರಮೋದ್ ಮುತಾಲಿಕ್ ಮಾತನಾಡಿದರು. ” ಕಾಂಗ್ರೆಸ್ನವರು ಒಟ್ಟಾರೆ ಹತಾಶರಾಗಿದ್ದಾರೆ. ಈ ರೀತಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ. ಹಿಂದೂರಾಷ್ಟ್ರ ಮಾಡಲು ಪುನಿತ್ನಂಥವರಿಗೆ ಫತ್ವಾ ಕೊಡಲಾಗಿದೆ ಅನ್ನೋ ಹೇಳಿಕೆ ಕೊಡುತ್ತಿದ್ದಾರೆ. ಅವರ ಹೇಳಿಕೆ ವಿಚಿತ್ರವಾಗಿದೆ, ಅವರಿಗೆ ದೇಶದ ಹಿಂದೂಗಳ ಶಾಪ ತಟ್ಟುತ್ತದೆ ” ಎಂದು ಮುತಾಲಿಕ್ ಕಿಡಿಕಾರಿದರು.
ಇದಕ್ಕಿಂತ ಒಳ್ಳೆ ಸೇವಿಂಗ್ಸ್ ಮತ್ತೊಂದಿಲ್ಲ..! ದಿನಕ್ಕೆ 50 ರೂಪಾಯಿ ಉಳಿಸಿ 30 ಲಕ್ಷ ನಿಮ್ಮದಾಗಿಸಿಕೊಳ್ಳಿ.!
‘ಕಾಂಗ್ರೆಸ್ ನವರಿಗೆ ರಾಮ ಶಕ್ತಿ, ರಾಮ ಭಕ್ತಿ ತಡೆದುಕೊಳ್ಳಲು ಆಗುತ್ತಿಲ್ಲ. ದಿನೇ ದಿನೇ ಉತ್ಸಾಹದ ವಾತಾವರಣ ಎಲ್ಲೆಡೆ ಹಬ್ಬುತ್ತಿದೆ. ಇದೀಗ ಕಾಂಗ್ರೆಸ್ನವರಿಗೆ ಮೈ ಪರಚಿಕೊಳ್ಳುವಂತಾಗಿದೆ” ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ”ನಿಮಗೆ ಒಪ್ಪಿಗೆಯಿಲ್ಲದಿದ್ದರೆ ಬಾಯಿ ಮುಚ್ಚಿಕೊಂಡಿರಿ. ನಿಮಗೆ ಭಕ್ತಿ ಇರದಿದ್ದರೆ ಸುಮ್ಮನಿರಿ. ನಮ್ಮ ಭಕ್ತಿ, ಭಾವನೆಗೆ ಧಕ್ಕೆಯಾಗುವಂಥ ಹೇಳಿಕೆ ಬೇಡ” ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.