ಕಂಪ್ಲಿ:- ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಮಹಿಳಾ ಪೌರಕಾರ್ಮಿಕರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು.
ಗದಗ: ಅದ್ದೂರಿ ಜರುಗಿದ ಶ್ರೀ ಶಂಕರಲಿಂಗ, ಗಡ್ಡಿ ಬಸವೇಶ್ವರ ಜಾತ್ರಾ ಮಹೋತ್ಸವ!
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದಂತಹ ಬ್ರಹ್ಮಕುಮಾರಿ ಸಕಲೇಶ್ವರಿ ಅಕ್ಕನವರು ಮಾತನಾಡುತ್ತಾ “ಪಟ್ಟಣದ ಸುಂದರತೆ ಮತ್ತು ಸಮಸ್ತ ಜನತೆ ಆರೋಗ್ಯವಾಗಿರಲು ಪಟ್ಟಣದ ಸ್ವಚ್ಛತೆ ಅತ್ಯಂತ ಪ್ರಮುಖವಾದದ್ದು, ಸ್ವಚ್ಛತೆಯೇ ದೇವರು,ಎಲ್ಲಿ ಸ್ವಚ್ಛತೆ ಇರುತ್ತದೆ ಅಲ್ಲಿ ದೇವರು ವಾಸ ಮಾಡುತ್ತಾರೆ ಎನ್ನಲಾಗುತ್ತದೆ.
ದೇವರಿಗೆ ಇಷ್ಟವಾದ ಸ್ವಚ್ಛತೆಯ ಶ್ರೇಷ್ಠ ಕಾರ್ಯವನ್ನು ಇಂದು ನಮ್ಮ ಪೌರಕಾರ್ಮಿಕ ಮಹಿಳಾ ಶಿರೋ ಮಣಿಗಳು ನಿಭಾಯಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇವರನ್ನು ಗೌರವಿಸುವುದು ಅಭಿನಂದಿಸುವುದು ಅತ್ಯಂತ ಅರ್ಥಪೂರ್ಣವಾದದ್ದು ಎನ್ನುವುದನ್ನು ಮನಕಂಡು ಈಶ್ವರಿಯ ವಿಶ್ವವಿದ್ಯಾಲಯ ಇಂದು ಇವರನ್ನ ಅಭಿನಂದಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈಶ್ವರಿಯ ವಿಶ್ವವಿದ್ಯಾಲಯವು ಸಹ ಮನುಷ್ಯನ ಆಂತರಿಕ ಸ್ವಚ್ಛತೆಯ ಕಾರ್ಯವನ್ನು ಮಾಡುತ್ತಿದೆ. ಆಂತರ್ಯದಲ್ಲಿರುವ ಕ್ರೋಧ -ದ್ವೇಷ,ಈರ್ಸೆ- ಅಸೂಯೆ,ಸುಳ್ಳು -ಕಳ್ಳತನ ಇತ್ಯಾದಿ ಕಸವನ್ನು ಸ್ವಚ್ಛಗೊಳಿಸಲು ಪ್ರತಿನಿತ್ಯ ಆಧ್ಯಾತ್ಮಿಕ ಜ್ಞಾನ ಮತ್ತು ದೇವರ ಧ್ಯಾನದ ಅವಶ್ಯಕತೆ ಇದೆ.ಬಹುಮುಖ ಜವಾಬ್ದಾರಿಯನ್ನು ನಿಭಾಯಿಸುವಂಥ ಮಹಿಳೆ ಮಾನಸಿಕವಾಗಿ ಸಶಕ್ತವಾಗಿರಬೇಕು ಸಹನೆ, ತಾಳ್ಮೆ, ಏಕಾಗ್ರತೆ,ಅಂತಹ ಮೌಲ್ಯಗಳು ಬೇಕಾಗುತ್ತದೆ,
ಹಾಗಾಗಿ ಪರಮಾತ್ಮ ಈ ಎಲ್ಲಾ ಮಹಿಳಾ ಶಿರೋಮಣಿಗಳಿಗೆ ಆಯುಷ್ಯ ಆರೋಗ್ಯ ಸಂಬಂಧ ಸಂಪತ್ತು ಮತ್ತು ಮೌಲ್ಯಗಳನ್ನ ತುಂಬಿ ಹರಿಸಲಿ ಎಂದು ಶುಭ ಹಾರೈಸುತ್ತೇವೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಬಿಕೆ ಗಾಯಿತ್ರಿ, ಸ್ವಾಗತಿಸಿದರು, ಕುಮಾರಿ ಉಷಾ ವಂದಿಸಿದರು, ಜೆಪಿ ಶಾಸ್ತ್ರಿ,ರವಿ ಗೌಡ, ಸರಸ್ವತಿ ಶಾಸ್ತ್ರಿ,ಸರೋಜಮ್ಮ, ಜಯಲಕ್ಷ್ಮಿ ಉಪಸ್ಥಿತ ಇದ್ದರು.