ಧಾರವಾಡ: ಧಾರವಾಡದ ಕೊಪ್ಪದಕೇರಿ ಶಿವಾಲಯದ ಬಳಿ ಕೊಲೆಗೀಡಾದ ವೃದ್ಧನ ಹೆಸರು ಹಾಗೂ ವಿಳಾಸ ತಿಳಿದು ಬಂದಿದೆ.ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಎಂಬುವವರೇ ಹತ್ಯೆಗೀಡಾದವರು.
ಆಸ್ತಿ ವಿಚಾರವಾಗಿ ಈ ವೃದ್ಧನ ಕೊಲೆ ಮಾಡಲಾಗಿದೆ. ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ವೃದ್ಧ ನಿಂಗಪ್ಪನನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ.
ಕೊಲೆ ಮಾಡಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.