ಬೆಳಗಾವಿ: ಕನ್ನಡಿಗರ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹಲ್ಲೆಗೈದ ನಾಲ್ವರು ಆರೋಪಿಗಳನ್ನ ಪೊಲೀಸರು ಅರೇಸ್ಟ್ ಮಾಡಿದ್ದಾರೆ. ಆದ್ರೆ ಕಂಡಕ್ಟರ್ ಮೇಲೆ ಪೋಕ್ಸೋ ಕೇಸ್ ದಾಖಲಿಸಿ ಪೊಲೀಸರು ಯಡವಟ್ಟು ಮಾಡಿಕೊಂಡಿದ್ದಾರೆ. ಪೊಲೀಸರ ವರ್ತನೆ ವಿರುದ್ಧ ಕನ್ನಡ ಹೋರಾಟಗಾರರು ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ರೆ. ಅತ್ತ ಕೊಲ್ಲಾಪುರದಲ್ಲಿ ಶಿವಸೇನೆ ಪುಂಡರು ಕರ್ನಾಟಕದ ಬಸ್ ಗೆ ಭಗ್ವಾಧ್ವಜ ಕಟ್ಟಿ ಪುಂಡಾಟ ಮೆರೆದಿದ್ದಾರೆ. ಸದ್ಯ ಗಡಿಯಲ್ಲಿ ಭಾಷಾ ವಿಚಾರದ ಕಿಚ್ಚು ಬೂದಿಮುಚ್ಚಿದ ಕೆಂಡದಂತಾಗಿದೆ.
ವಿದ್ಯುತ್ ಬಿಲ್ ವಸೂಲಿಗೆ ಬಂದ ಸಿಬ್ಬಂದಿಗೆ ಕಲ್ಲಿನಿಂದ ಹಲ್ಲೆ! ಗ್ರಾಹಕರದ್ದು ಇದೆಂಥಾ ವರ್ತನೆ!
ಹೌದು… ಬೆಳಗಾವಿಯಲ್ಲಿ ಕನ್ನಡ ಮಾತಾಡು ಅಂದಿದ್ದಕ್ಕೆ ಕಂಡಕ್ಟರ್ ಮಹಾದೇವ ಹುಕ್ಕೇರಿ ಮೇಲೆ ಎಂಇಎಸ್ ಪುಂಡರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ತೀವ್ರ ಹಲ್ಲೆಗೆ ಒಳಗಾದ ಕಂಡಕ್ಟರ್ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅತ್ತ ಪೊಲೀಸರು ಹಲ್ಲೆ ಮಾಡಿದ ಓರ್ವ ಅಪ್ರಾಪ್ತ ಸೇರಿ ನಾಲ್ವರನ್ನ ಅರೇಸ್ಟ್ ಮಾಡಿದ್ದಾರೆ. ಬೆಳಗಾವಿ ತಾಲೂಕಿನ ಬಾಳೇಕುಂದ್ರಿ ಗ್ರಾಮದ ಮಾರುತಿ ಚಂದಗಡಕರ 33, ರಾಹುಲ್ ನಾಯ್ಡು 28, ಬಾಳು ಗೊಂಜೇಕರ 28 ಅರೇಸ್ಟ್ ಮಾಡಿ ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ. ಆದ್ರೆ ಕನ್ನಡಿಗ ಕಂಡಕ್ಟರ್ ವಿರುದ್ಧ ಮಧ್ಯೆ ರಾತ್ರಿಯೇ ಪೋಕ್ಸೋ ಕೇಸ್ ದಾಖಲಿಸಿ ಬೆಳಗಾವಿ ಮಾಳಮಾರುತಿ ಪೊಲೀಸರು ಯಡವಟ್ಟು ಮಾಡಿದ್ದಾರೆ. ಬಸ್ ನಲ್ಲಿ ಕಂಡಕ್ಟರ್ ಕೆಟ್ಟ ದೃಷ್ಟಿಯಿಂದ ನೋಡಿದಾ ಅಂತಾ ಬಾಲಕಿಯಿಂದ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಬೆಳಗಾವಿ ಟು ಸುಳೇಬಾವಿಗೆ ಹೋಗುವ ಬಸ್ ನಲ್ಲಿ ಜನ ತುಂಬಿ ತುಳುಕುತ್ತಿದ್ದರು. ಅದರಲ್ಲೂ ನಿನ್ನೆ ಶುಕ್ರವಾರ ಹೀಗಾಗಿ ಸುಳೇಭಾವಿ ಮಹಾಲಕ್ಷ್ಮಿಗೆ ಸಾವಿರಾರು ಮಹಿಳಾ ಭಕ್ತರು ಬರ್ತಾರೆ. ಹೀಗಾಗಿ ಇಷ್ಟೊಂದು ಮಹಿಳಾ ಪ್ರಯಾಣಿಕರೇ ಇರೋ ಬಸ್ ನಲ್ಲಿ ಬಾಲಕಿಯೊಂದಿಗೆ ಅಸಭ್ಯ ವರ್ತನೆ ಸಾಧ್ಯನಾ ಅನ್ನೋ ಪ್ರಶ್ನೆ ಎದುರಾಗಿದೆ. ಪ್ರಕರಣದ ದಾರಿ ತಪ್ಪಿಸಲು ಪೊಲೀಸರು ಕೌಂಟರ್ ಕೇಸ್ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅತ್ತ ಪೊಲೀಸರ ಪೋಕ್ಸೋ ಕೇಸ್ ಸುಳ್ಳು ಅಂತಾ ಕಂಡಕ್ಟರ್ ಮಹಾದೇವ ಹುಕ್ಕೇರಿ, ಬಸ್ ಚಾಲಕ ತಳ್ಳಿ ಹಾಕಿದ್ದಾರೆ. ಅದರಲ್ಲೂ ಕಂಡಕ್ಟರ್ ನನ್ನ ಸರ್ವೀಸ್ ನಲ್ಲೇ ಮಹಿಳೆಯರೊಂದಿಗೆ ಅಸಭ್ಯವರ್ತನೆ ಮಾಡಿಲ್ಲ. ನನ್ನ ಮಗನ ವಯಸ್ಸಿನ ಬಾಲಕಿಯವಳು ಅಂತಾ ಕಣ್ಣೀರು ಹಾಕಿದ್ದಾನೆ. ಅತ್ತ ಬೆಳಗಾವಿ ಪೊಲೀಸ್ ಕಮೀಷನರ್ ಯಡಾ ಮಾರ್ಟಿನ್ ಮಾತನಾಡಿ, ಹಲ್ಲೆ ಸಂಬಂಧಿಸಿದಂತೆ ನಾಲ್ವರನ್ನ ಅರೇಸ್ಟ್ ಮಾಡಿದ್ದೇವೆ. ಉಳಿದ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ ಮಾಡಿದ್ದೇವೆ. ಕಂಡಕ್ಟರ್ ವಿರುದ್ಧ ಬಾಲಕಿ ಪೋಕ್ಸೋ ಕೇಸ್ ಕೊಟ್ಟಿದ್ದಾಳೆ. ಈ ದೂರು ಸತ್ಯವಾ ಸುಳ್ಳಾ ಅನ್ನೋದನ್ನ ತನಿಖೆಯಲ್ಲಿ ಗೊತ್ತಾಗಲಿದೆ. ಬಸ್ಸಿನಲ್ಲಿ ಇದ್ದ ಪ್ರಯಾಣಿಕರನ್ನ ವಿಚಾರಣೆಗೆ ಒಳ ಪಡಿಸುತ್ತೇವೆ. ಅಪ್ರಾಪ್ತ ಬಾಲಕಿ ಆಗಿದ್ದರಿಂದ ನಾವು ದೂರು ದಾಖಲಿಸಿಕೊಂಡಿದ್ದೇವೆ ತನಿಖೆಯಿಂದ ಸತ್ಯ ಗೊತ್ತಾಗಲಿದೆ ಅಂತಾ ಹೇಳಿದ್ದಾರೆ.
ಇನ್ನೂ ಕನ್ನಡ ಮಾತಾಡು ಎಂದ್ದಿದ್ದಕ್ಜೆ ಕಂಡಕ್ಟರ್ ಮೇಲೆ ಹಲ್ಲೆ ಘಟನೆ ಮತ್ತು ಪೋಕ್ಸೋ ಕೇಸ್ ಪ್ರಕರಣ ಖಂಡಿಸಿ ಕರವೇ ಶಿವರಾಮೆ ಗೌಡ ಬಣದ ಕಾರ್ಯಕರ್ತರು ಬಾಳೇಕುಂದ್ರಿ ಗ್ರಾಮದಲ್ಲಿ ಬೆಳಗಾವಿ ಬಾಗಲಕೋಟೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು. ಎಂಇಎಸ ಪುಂಡರ ಅಣಕು ಶವವನ್ನ ದಹಿಸಿ ಆಕ್ರೋಶ ಹೊರಹಾಕಿದ್ರು. ಶವ ದಹಿಸುತ್ತಿದ್ದಂತೆ ಹೋರಾಟಗಾರರನ್ನ ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದುಕೊಂಡು ಹೋದ್ರು. ಅತ್ತ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಮಾರಿಹಾಳ ಪೊಲೀಸ್ ಠಾಣೆಗೆ ಮುತ್ತಿಗೆ ಪ್ರತಿಭಟನೆ ನಡೆಸಿದ್ರು. ಕನ್ನಡಿಗರಿಗೆ ರಕ್ಷಣೆ ಕೊಡಬೇಕು. ಎಂಇಎಸ್ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ರು. ಅಲ್ಲದೇ ಕಂಡಕ್ಟರ್ ಮೇಲೆ ದಾಖಲಿಸಿರೋ ಸುಳ್ಳು ಪೋಕ್ಸೋ ಕೇಸ್ ವಾಪಸ್ ಪಡೆಯುವಂತೆ ಪಟ್ಟು ಹಿಡಿದ್ರು ಕರವೇ ಕಾರ್ಯಕರ್ತರನ್ನ ಪೊಲೀಸರು ಠಾಣೆ ಮುಂದೆಯೇ ವಶಕ್ಕೆ ಪಡೆದುಕೊಂಡ್ರು. ಒಂದೆಡೆಗೆ ರಾಜ್ಯಾದ್ಯಂತ ಕಂಡಕ್ಟರ್ ಮೇಲೆ ಎಂಇಎಸ ಗೂಂಡಾಗಿರಿಗೆ ತೀವ್ರ ವಿರೋಧ ವ್ಯಕ್ತವಾದ್ರೆ. ಮತ್ತೊಂದೆಡೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಉದ್ಧವ ಠಾಕ್ರೆ ಬಣದ ಶಿವಸೇನೆ ಮತ್ತೆ ಪುಂಡಾಟ ಪ್ರದರ್ಶನ ಮಾಡಿದೆ. ಕೊಲ್ಲಾಪುರದಲ್ಲಿ ಕರ್ನಾಟಕದ ಬಸ್ ತಡೆದು ಭಗ್ವಾಧ್ವಜ ಕಟ್ಟಿ ಅಟ್ಟಹಾಸ ಪ್ರದರ್ಶಿಸಿದೆ. ಭಾಷಾ ವಿವಾದದಿಂದ ಮತ್ತೆ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರದ ಬಸ್ ಗಳನ್ನ ಬೆಳಗಾವಿ ಸೇರಿ ವಿವಿಧ ಗಡಿ ಜಿಲ್ಲೆಗಳಿಗೆ ಕಾರ್ಯಾಚರಣೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಒಟ್ಟಿನಲ್ಲಿ ಬೆಳಗಾವಿಯಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲದಂತಾಗಿದೆ. ಎಂಇಎಸ್ ಪುಂಡರ ಗೂಂಡಾಗಿರಿಗೂ ಸರ್ಕಾರ ಬ್ರೇಕ್ ಹಾಕ್ತಿಲ್ಲ. ಮೇಲಾಗಿ ಪೊಲೀಸರು ಕಂಡಕ್ಟರ್ ವಿರುದ್ಧವೇ ಪೋಕ್ಸೋ ಕೇಸ್ ದಾಖಲಿಸಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.