ಬೆಂಗಳೂರು:- ಹೊಸವರ್ಷಕ್ಕೆ ಇನ್ನೇನೂ ಕೆಲವೇ ದಿನಗಳು ಬಾಕಿ ಇದ್ದು, ಪಾರ್ಟಿ ಮಾಡಿ ತೂರಾಡುವವರಿಗೆ ಕಠಿಣ ರೂಲ್ಸ್ ಜಾರಿ ಆಗಲಿದೆ.
ಎಳನೀರು ಒಳ್ಳೆಯದೇ, ಆದರೆ ಎಲ್ಲರಿಗೂ ಅಲ್ಲ! ಇದನ್ನು ಯಾರು ಕುಡಿಯಬಾರದು ಗೊತ್ತಾ?
ಹೊಸವರ್ಷದ ಸಂಭ್ರಮದ ನಡುವೆ ಯಾವುದೇ ಅವಘಢ ಸಂಭವಿಸಿದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಪೊಲೀಸರು ಆಯಾ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಅಂತ ನಗರ ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದ್ದಾರೆ.
ಈಗಾಗಲೇ ಸಂಬಂಧಪಟ್ಟ ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ನಮ್ಮ ಮೆಟ್ರೋ ಇಲಾಖೆಗಳೊಂದಿಗೆ 2-3 ಸುತ್ತಿನ ಸಭೆ ಮಾಡಲಾಗಿದೆ. ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ, ಅತಿಹೆಚ್ಚು ಜನ ಸೇರುವ ಎಮ್.ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ, ಮಹಿಳೆಯರಿಗೆ ಮಹಿಳಾ ಸೇಫ್ಟಿ, ಹೈ ಲ್ಯಾಂಡ್, ವಾಚ್ ಟವರ್, ಶ್ವಾನ ದಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಡ್ರೋನ್ ಕ್ಯಾಮೆರಾ ನಿಯೋಜಿಸಿದ್ದು, ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಬ್ರಿಗೇಡ್ ರೋಡ್ಗೆ ಕಾವೇರಿ ಎಪೋರಿಯಂನಿಂದ ಮಾತ್ರ ಎಂಟ್ರಿ ಇರಲಿದೆ. ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿದ್ದು, ಮಧ್ಯರಾತ್ರಿ 1 ಗಂಟೆ ತನಕ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ ಎಂದರು.