ಕಂಪ್ಲಿ:- ಪಟ್ಟಣದ ನಿವೇದಿತ ಆಂಗ್ಲ ಮಾಧ್ಯಮ ಶಾಲೆ ಕಂಪ್ಲಿಯಲ್ಲಿ ಡಾಕ್ಟರ್ ಬಿ.ಆರ್ ಅಂಬೇಡ್ಕರ್ 133ನೇ ಜಯಂತ್ಯುತ್ಸವವನ್ನು ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಹೆಚ್ ಮರಿಯಪ್ಪ ಮಾತನಾಡಿ ಸಂವಿಧಾನದ ಶಿಲ್ಪ ಡಾಕ್ಟರ್ ಅಂಬೇಡ್ಕರ್ ಜಯಂತಿ ಕೇವಲ ಪ್ರತಿ ವರ್ಷಕ್ಕೆ ಮಾತ್ರ ಸಿಮಿತವಲ್ಲ, ಪ್ರತಿ ದಿನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಜೀವನದ ಸಾಧನೆಗಳನ್ನು ಸ್ಮರಿಸಿ ಅವರ ಸಾಧನೆ ದಾರಿಯಲ್ಲಿ ಸಾಗಬೇಕೆಂದರು.
ನಮ್ಮ ದೇಶದಲ್ಲದೇ ಇಡೀ ಪ್ರಪಂಚದಾದ್ಯಂತ ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಇದಕ್ಕೆ ಕಾರಣ ಅವರು ನೀಡಿರುವಂತಹ ಸಂವಿಧಾನ ಮಹತ್ವ.
ಇಡೀ ಭಾರತ ದೇಶ ಸಂವಿಧಾನ ಕಾಯ್ದೆ ಕಾನೂನುಗಳು ಮೂಲಕವೇ ಸಂವಿಧಾನ ಬದ್ಧ ಎಲ್ಲ ಕೆಲಸ ಕಾರ್ಯಗಳು ನಡೆಯುತ್ತವೆ. ಇಂತಹ ಸಂವಿಧಾನ ಮಹತ್ವವನ್ನು ಅರಿತು ಸಂವಿಧಾನ ನಾವು ಓದುವ ಮೂಲಕ ಸಂವಿಧಾನದ ಬಗ್ಗೆ ಸಮಾಜ ಎಲ್ಲ ಜನ ಸಾಮಾನ್ಯರಲ್ಲಿ ಅರಿವನ್ನು ಮೂಡಿಸುವುದರ ಮೂಲಕ ಅಂಬೇಡ್ಕರ್ ಅವರ ಕನಸುಗಳನ್ನು ನೆನೆಸು ಮಾಡಬೇಕು ಎಂದು ತಿಳಿಸಿದರು.
ನಂತರ ಸಹ ಶಿಕ್ಷಕಿ ನಾಗವೇಣಿ ಮಾತನಾಡಿ ಮಹಿಳೆಯರು ಇಂದು ಪ್ರತಿಯೊಂದು ಸಂಸ್ಥೆಗಳಲ್ಲಿ ಕಚೇರಿಗಳಲ್ಲಿ ಎಲ್ಲ ಮಹಿಳೆಯರು ತೆಲೆ ಎತ್ತಿ ನಿಂತು ನೋಡುವಂತೆ ಶಿಕ್ಷಣ, ಸಂಘಟನೆ, ಹೋರಾಟ, ಎಂಬ ಅವರ ನಂಬಿಕೆಗಳೇ ಸಾಕ್ಷಿ..
ನಾವು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಪೂಜಿಸುವುದು ಮಾತ್ರವಲ್ಲ, ಅವರು ಕೊಟ್ಟಿರುವ ಸಂವಿಧಾನ ಕಾಯ್ದೆ ಕಾನೂನುಗಳು ಹಾಗೂ ಅವರ ಕೊಡುಗೆಯನ್ನು ಅರ್ಥೈಸಿ ಅವರಿಗೆ ನಾವು ಚಿರಋಣಿಯಾಗಿರಬೇಕು. ಮಹಿಳೆಯರ ಬಗ್ಗೆ ಅತಿ ಹೆಚ್ಚಿನ ಕಾಳಜಿಯನ್ನ ವಹಿಸಿ ಸಮಾಜದಲ್ಲಿ ಮಹಿಳೆಯರಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ನಿವೇದಿತಾ ಶಾಲೆಯ ಕಾರ್ಯದರ್ಶಿಗಳಾದ ಕೆ.ರಾಮ, ಸಹ ಶಿಕ್ಷಕಿ ದುರ್ಗಮ್ಮ ಹಾಗೂ ಮಕ್ಕಳು ಸೇರಿದಂತೆ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.