ಕಂಪ್ಲಿ.ಮಾ.28:ಕಂಪ್ಲಿ ಪಟ್ಟಣದ ವಿನಾಯಕ ನಗರ ಹಾಗೂ ತಾಲೂಕಿನ ಸಣಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಮನೆಗಳ್ಳತನ ಮಾಡಿದಂತಹ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಕಂಪ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪಟ್ಟಣದ ವಿನಾಯಕ ನಗರದಲ್ಲಿ ಹಾಗೂ ಸಣಾಪುರ ಗ್ರಾಮದಲ್ಲಿ ರಾತ್ರಿ ವೇಳೆ ಬೀಗ ಮುರಿದು ಮನೆಗಳ್ಳತನ ಮಾಡಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 5 ತೊಲೆ ಬಂಗಾರದ ಅಭರಣಗಳು, 18 ತೊಲೆ ಬೆಳ್ಳಿ ಅಭರಣಗಳು ಹಾಗೂ ನಗದು ಹಣ ರೂ.30ಸಾವಿರ ಮತ್ತು ಮನೆಗಳ್ಳತನ ಮಾಡಲು ಬಳಸುತ್ತಿದ್ದ ಒಂದು ಬಜಾಜ್ ಕಂಪನಿಯ ಡಿಸ್ಕವರಿ ಮೊಟರ್ ಸೈಕಲ್ ದ್ವಿಚಕ್ರ ವಾಹನ ಈ ಎಲ್ಲಾ ಸೇರಿ ಒಟ್ಟು 4,50,000ಬೆಲೆ ಬಾಳುವ ಬಂಗಾರ, ಬೆಳ್ಳಿ, ಮತ್ತು ಮೋಟಾರ್ ಸೈಕಲ್ ಅನ್ನು ಬಳ್ಳಾರಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ರವರು ಮತ್ತು ಎಎಸ್ ಪಿ ಗಳಾದ ರವಿಕುಮಾರ,ನವೀನ್ ಕುಮಾರ ಹಾಗೂ ತೋರಣಗಲ್ ಉಪವಿಭಾಗದ ಡಿವೈಎಸ್ಪಿ ಪ್ರಸಾದ ಗೋಖಲೆ ಮಾರ್ಗದರ್ಶನದಲ್ಲಿ ಪತ್ತೆ ಕಾರ್ಯಕ್ಕಾಗಿ ಕಂಪ್ಲಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಪ್ರಕಾಶ್ ಮಾಳಿ ರವರ ನೇತೃತ್ವದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ತನಿಖೆ ವಿಭಾಗದ ಪಿಎಸ್ಐ ಬಿ.ಎಸ್.ನಾಯ್ಡು, ಎಎಸ್ಐ ಬಿ.ಬಸವರಾಜ್ ಸಿಬ್ಬಂದಿಯ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ
ಈ ಸಂದರ್ಭದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ದತ್ತಾತ್ರೇಯ,ವಿಜಯಕುಮಾರ್, ಮಲ್ಲೇಶ್ ರಾಥೋಡ್,ತಿಮ್ಮಯ್ಯ, ಸ್ಯಾಮುವೆಲ್, ಸತ್ಯನಾರಾಯಣ,ಮುತ್ತುರಾಜ್,ಗಾದಿಲಿಂಗಪ್ಪ, ವಿಶ್ವನಾಥ್,ಮಾರುತಿ,ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು