ನವದೆಹಲಿ: ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ದೂರು ದಾಖಲಾಗಿದೆ.
ಪ್ರಧಾನಿಯನ್ನು ಪನೌತಿ ಮೋದಿ ಎಂದು ಹಾಗೂ ಜೇಬುಗಳ್ಳ ಎಂದು ಟೀಕಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ನಿಯೋಗ ದೂರು ನೀಡಿದೆ.
ಇದೇ ವೇಳೆ, ಮೋದಿ ಗುಜರಾತ್ ಮುಖ್ಯಮಂತ್ರಿಯಾದ ನಂತರ ಅವರ ಜಾತಿ ಒಬಿಸಿ ಪಟ್ಟಿಗೆ ಸೇರಿತು ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧವೂ ದೂರು ನೀಡಿದೆ.
ಇನ್ನು ಇಂದಿರಾ ಗಾಂಧಿ ಅವರು 1982ರಲ್ಲಿ ಭಾರತವು ಪಾಕ್ ವಿರುದ್ಧ ಹಾಕಿ ಪಂದ್ಯ ಸೋಲುವ ಲಕ್ಷಣ ಕಾಣಿಸಿದ ಬೆನ್ನಲ್ಲೇ, ಪಂದ್ಯ ವೀಕ್ಷಿಸುತ್ತಿದ್ದ ಅಂದಿನ ಪ್ರಧಾನಿ ಇಂದಿರಾ ಗಾಂಧಿ, ಸ್ಟೇಡಿಯಂನಿಂದ ನಿರ್ಗಮಿಸಿದ್ದರು. ಇದು ಆಟಗಾರರ ನೈತಿಕ ಸ್ಥೈರ್ಯ ಕುಸಿಯುವಂತೆ ಮಾಡಿತ್ತು. ಆದರೆ ಮೋದಿ ಹಾಗಲ್ಲ. ಭಾರತವು ಕ್ರಿಕೆಟ್ನಲ್ಲಿ ಸೋತರೂ ಆಟಗಾರರಿಗೆ ಧೈರ್ಯ ತುಂಬಿದರು ಎಂದು ಬಿಜೆಪಿ ಹೇಳಿದೆ.
ಪ್ರಧಾನಿ ಮೋದಿ ಮೇಲೆ ನಿರಂತರವಾಗಿ ಹೀಗೆ ಟೀಕೆ ಮಾಡುತ್ತಿರುವ ಖರ್ಗೆ ಹಾಗೂ ರಾಹುಲ್ ಗಾಂಧಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಮುಂದೆ ಇಂತಹ ಆಧಾರರಹಿತ ಮತ್ತು ಸಂಕುಚಿತ ಹೇಳಿಕೆಗಳನ್ನು ನೀಡದಂತೆ ನಿಷೇಧಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಉಲ್ಲೇಖಿಸಲಾಗಿದೆ.