ಇನ್ನೇನು ಹೊಸ ವರ್ಷಕ್ಕೆ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಕಿ ಸಾಕಷ್ಟು ಜನ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿರ್ತಾರೆ. ಅದರಲ್ಲೂ ಹಲವರು ಹೊಸ ವಾಹನಗಳನ್ನು ಖರೀದಿ ಮಾಡಬೇಕು ಎಂದುಕೊಂಡಿರ್ತಾರೆ. ಆದರೆ ಹೊಸ ಕಾರು ಖರೀದಿ ಮಾಡ್ಬೇಕು ಎಂದುಕೊಂಡಿರುವವರಿಗೆ ಬಿಗ್ ಶಾಕ್ ಕಾದಿದೆ.
ಹೊಸ ವರ್ಷಕ್ಕೆ ಕಾರುಗಳ ಕಂಪನಿಗಳು ಭರ್ಜರಿ ಆಫರ್ ಕೊಡ್ತಾರೆ. ಇಯರ್ ಎಂಡ್ನಲ್ಲಿ ಕಾರು ಖರೀದಿಸೋದು ಬೇಡ. ಹೊಸ ವರ್ಷದಿಂದ ಹೊಸ ಕಾರು ಖರೀದಿಸೋಣ ಎಂದು ಸಾಕಷ್ಟು ಜನ ಅಂದುಕೊಂಡಿರ್ತೀರಾ. ಆದರೆ ಭಾರತದಲ್ಲಿ ಮುಂದಿನ ತಿಂಗಳಿಂದ ಕಾರುಗಳ ಬೆಲೆ ಹೆಚ್ಚಳ ಮಾಡಲು ಕಾರು ಕಂಪನಿಗಳು ಮುಂದಾಗಿವೆ.
ಪ್ರತಿಷ್ಠಿತ ಕಾರು ಕಂಪನಿಗಳಾದ ಮಾರುತಿ ಸುಜುಕಿ ಕಂಪನಿ, ಹುಂಡೈ, ಮಹೀಂದ್ರಾ , ಎಂಜಿ ಮೋಟಾರ್ಸ್ ಕಂಪನಿಯ ಕಾರ್ಗಳ ಬೆಲೆ ಹೆಚ್ಚಳ ಆಗಲಿದೆ.
ಮಾರುತಿ ಸುಜುಕಿ ಕಂಪನಿಯ ಕಾರುಗಳ ಬೆಲೆ ಶೇ.4 ರಷ್ಟು ಹೆಚ್ಚಳ
ಮಹಿಂದ್ರಾ ಕಂಪನಿಯ SUV ಕಾರ್ಗಳ ಬೆಲೆ ಶೇ.3 ರಷ್ಟು ಹೆಚ್ಚಳ
ಎಂಜಿ ಮೋಟಾರ್ ಕಂಪನಿಯ ಕಾರ್ಗಳ ಬೆಲೆ ಶೇ.3 ರಷ್ಟು ಹೆಚ್ಚಳ
ಹುಂಡೈ ಕಂಪನಿಯ ಕಾರ್ಗಳ ಬೆಲೆ 25 ಸಾವಿರ ರೂಪಾಯಿ ಹೆಚ್ಚಳ
ಇವಷ್ಟೇ ಅಲ್ಲ, ಐಷಾರಾಮಿ ಕಾರುಗಳಾದ ಮರ್ಸಿಡಿಸ್ ಬೆಂಜ್, ಆಡಿ, ಬಿಎಂಡಬ್ಲ್ಯು ಕಂಪನಿಯ ಕಾರುಗಳ ಬೆಲೆ ಕೂಡ ಮುಂದಿನ ತಿಂಗಳಿನಿಂದಲೇ ಹೆಚ್ಚಳ ಆಗಲಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕಂಪನಿಯ ನಿರ್ವಹಣಾ ವೆಚ್ಚ ಮತ್ತು ಕಾರುಗಳ ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಬೆಲೆ ಏರಿಕೆಯ ನಿರ್ಧಾರಕ್ಕೆ ಕಂಪೆನಿಗಳು ಮುಂದಾಗಿವೆ.