ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಹತ್ತಿರ ಬರುತ್ತಿದ್ದಂತೆಯೇ ಮನೆ ಮಂದಿ ಖುಷ್ ಆಗಿದ್ದಾರೆ. ಹೌದು ಮನೆಮಂದಿಗೆ ಕಿಚ್ಚನ ಕೈರುಚಿ ತಿನ್ನುವ ಭಾಗ್ಯ ಸಿಕ್ಕಿದೆ. ಪ್ರತೀ ಸೀಸನ್ ನಲ್ಲೂ ಪ್ರೀತಿಯಿಂದ ತಮ್ಮ ಕೈಯಾರೆ ಅಡುಗೆ ಮಾಡಿ ಕಳಿಸಿ ಕೊಡುತ್ತಿದ್ದ ಕಿಚ್ಚ ಈ ಬಾರಿ ಕೂಡ ಮನೆಯವರಿಗೆ ರುಚಿರುಚಿಯಾದ ಅಡುಗೆ ಮಾಡಿ ಜೊತೆಗೆ ಸಂದೇಶ ಬರೆದು ಕಳುಹಿಸಿಕೊಟ್ಟಿದ್ದಾರೆ.
ಪ್ರತೀ ಸೀಸನ್ ನಲ್ಲೂ ಸುದೀಪ್ ಊಟದ ಜೊತೆಗೆ ಎಲ್ಲಾ ಸ್ಪರ್ಧಿಗಳಿಗೂ ವಿಶೇಷ ಸಂದೇಶಗಳನ್ನು ಬರೆದು ಕಳುಹಿಸಿಸುತ್ತಿದ್ದರು. ಆ ಒಂದೊಂದು ಸಂದೇಶದಲ್ಲಿ ಒಳಾರ್ಥವಿರುತ್ತದೆ. ಈ ಬಾರಿಯ ಸ್ಪರ್ಧಿಗಳಿಗೆ ಕಿಚ್ಚ ಏನು ಸಂದೇಶ ಕೊಟ್ಟಿರಬಹುದು ಎಂಬ ವಿಚಾರ ಇಂದಿನ ಎಲಿಸೋಡ್ ನಲ್ಲಿ ತಿಳಿಯಲಿದೆ.
ಪುರುಷರ ಫಲವತ್ತತೆ ಹೆಚ್ಚಿಸೋಕು ಸೈ! ದೇಹದ ತೂಕ ಇಳಿಸೋಕು ಸೈ ಈ ಸಿಹಿ ಕುಂಬಳಕಾಯಿ
ಹಸಿದವರಿಗೆ ಊಟ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಖುಷಿ ಬೇರೆ ಇಲ್ಲ. ಅಂತೆಯೇ ಕಿಚ್ಚನ ಸಂದೇಶದ ಜೊತೆಗೆ ಕೈಯಾರೆ ಅಡುಗೆ ತಿನ್ನುವ ಅದೃಷ್ಟ ರಜತ್, ಮಂಜು, ಹನುಮಂತ, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ, ಗೌತಮಿ, ಚೈತ್ರಾ, ಧನ್ರಾಜ್ ಅವರ ಪಾಲಾಗಿದೆ.
ಕಿಚ್ಚ ಕಳಿಸಿದ ಕೈರುಚಿಗೆ ಮನೆ ಮಂದಿ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ, ಇಂತಹ ಒಂದು ಸಪ್ರೈಸಸ್, ಇಂತಹ ಒಂದು ಮೂಮೆಂಟ್ ಕ್ರಿಯೇಟ್ ಮಾಡೋದು ನಿಮ್ಮಿಂದ ಮಾತ್ರ ಸಾಧ್ಯ ಸರ್ ಎಂದು ರಜತ್ ಹೇಳಿದ್ದಾರೆ. ನಿಮ್ಮ ಕೈನಿಂದ ನನ್ನ ಹೆಸರನ್ನು ಬರೆಸಿಕೊಳ್ಳುವುದೇ ನನ್ನ ಭಾಗ್ಯ ಎಂದು ನಾನು ಭಾವಿಸುತ್ತೇನೆ ಧನ್ಯವಾದಗಳು ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಚ, ಬಿಗ್ಬಾಸ್ ಮನೆಗೆ ಬಂದಿದ್ದು ಸಾರ್ಥಕವಾಯ್ತು ಎಂದು ಹನುಮಂತು ಹೇಳಿದ್ದಾರೆ.