ಕಲಘಟಗಿ: ಮಳೆ ಹೋಗಿಯೂ ಕೆಡಿಸಿತು. ಆಗಿಯೂ ಕೆಡಿಸಿತು ಎಂಬ ಮಾತು ಅಕ್ಷರಶಃ ಸತ್ಯ. ಮಳೆ ನಂಬಿ ತನ್ನ ಬದುಕಿನ ಬಂಡಿ ಸಾಗಿಸುವುದರ ಜೊತೆಗೆ ಇಡೀ ಮನುಕುಲಕ್ಕೆ ಅನ್ನ ನೀಡುತ್ತಾನೆ ರೈತ ಸಕಾಲದಲ್ಲಿ ಮಳೆಯಾದರೆ ಅನ್ನದಾತನಷ್ಟು ಖುಷಿ ಮತ್ತೊಬ್ಬರಿರುವುದಿಲ್ಲ. ಆದರೆ, ಅತಿವೃಷ್ಟಿಯಾದಾಗ ಅನ್ನದಾತನಷ್ಟು ನಷ್ಟ ಅನುಭವಿಸುವವರು ಯಾರೂ ಇಲ್ಲ. ನಿನ್ನೆ ಸುರಿದ ಅತಿಯಾದ ಮಳೆಯಿಂದಾಗಿ ರೈತರೊಬ್ಬರ ಬದುಕು ನೀರಿನಲ್ಲಿ ಕೊಚ್ಚಿ ಹೋದಂತಾಗಿದೆ.
ಹೌದು! ಹೀಗೆ ಮೇಕೆ ಜೋಳ ಬಿಸಿಲಿನಲ್ಲಿ ನಿಂತು ಮಳೆಯಿಂದಾಗಿ ಹಾಳಾಗಿರುವ ಮೇಕೆ ಜೋಳ ಕಾಳುಗಳನ್ನು ಎಳೆದು ಜಗ್ಗು ತಿರುವು ಈ ರೈತನ ಹೆಸರು ರಾಮಪ್ಪ ಭೋಜಪ್ಪ ಲಮಾಣಿ, ಹನುಮಂತ ವಾಸು ಲಮಾಣಿ, ಮಲ್ಲೇಸಿ ಸತ್ಯಮನವರ ಶಿವ ಕಲ್ಲಪ್ಪ ಇವರು ಕಲಘಟಗಿ ತಾಲೂಕಿನ ಮಾಚಾಪುರ, ಹಾಗೂ ತಮರಿಕೋಪ್ಪ ಗ್ರಾಮದವರು.
Devi Mahagauri Avtar: ನವರಾತ್ರಿಯ 8ನೇ ದಿನದ “ಮಹಾಗೌರಿ ಪೂಜೆ” ಮಾಡುವುದು ಹೇಗೆ.? ಇಲ್ಲಿವೆ ಮಂತ್ರಗಳು
ಸದ್ಯಕ್ಕೆ ಮೇಕೆ ಜೋಳಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ದರ ಇದೆ. ಪ್ರತಿ ಕ್ವಿಂಟಾಲ್ 2200 ರೂಪಾಯಿಯಂತೆ ಮಾರಾಟವಾಗುತ್ತಿದೆ. ಆದರೆ, ಇಂತಹ ಸಂದರ್ಭದಲ್ಲೇ ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಈ ರೈತನ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರಾಮಪ್ಪ ಭೋಜಪ್ಪ ಲಮಾಣಿ 3 ಎಕರೆ ಪ್ರದೇಶದಲ್ಲಿ ಮೇಕೆ ಜೋಳ ಬೆಳೆದಿದ್ದಾರೆ.
ಉದಾಹರಣೆಯೂ ಇದೆ. ಮಾರುಕಟ್ಟೆಯಲ್ಲಿ ಏನೇ ವೈಪರಿತ್ಯ ಆದರೂ ಅದರ ನಷ್ಟ ಅನುಭವಿಸುವುದು ಬೆಳೆ ಬೆಳೆದ ರೈತನೇ ಹೊರತು ಮತ್ತಾರೂ ಅಲ್ಲ. ಇದೀಗ ಉತ್ತಮ ಬೆಲೆ ಇರುವಾಗ ಮಳೆಯಿಂದ ಮೆಕ್ಕೆಜೋಳ ನಾಶವಾಗಿದೆ. ಲಕ್ಷಗಟ್ಟಲೇ ಲಾಭ ತೆಗೆಯಬೇಕು ಎಂದುಕೊಂಡಿದ್ದ ರೈತನ ಆಸೆಗೆ ಮಳೆರಾಯ ತಣ್ಣೀರು ಎರಚಿದ್ದಂತೂ
ಸುಳ್ಳಲ್ಲ.
ವರದಿ : ಮಾರುತಿ ಲಮಾಣಿ